ಸುದ್ದಿ ಕನ್ನಡ ವಾರ್ತೆ
ತಾಲೂಕಿನ ರಾಮನಗರ ಸರಕಾರಿ ಪ್ರೌಢ ಶಾಲೆಯಲ್ಲಿ ನಿವೃತ್ತ ಅರಣ್ಯಾಧಿಕಾರಿಗಳ ಸಂಘ ಧಾರವಾಡವು ನಡೆಸಿದ ಎಸ್ ಎಸ್ ಎಲ್ ಸಿ ರಾಜ್ಯ ಪಠ್ಯಕ್ರಮ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ ಪುಸ್ತಕಗಳ ಬಿಡುಗಡೆ ಹಾಗೂ ವಿತರಣಾ ಕಾರ್ಯಕ್ರಮವನ್ನೂ ಬಸವರಾಜ ಹೊರಟ್ಟಿ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಧ್ಯಾರ್ಥಿ ಜೀವನ ಅಮುಲ್ಯವಾದದ್ದು, ಶಿಕ್ಷಣ ನೀಡುವ ಗುರು ಇನ್ನೂ ಶ್ರೇಷ್ಟರು, ದೇಶದ ಬೆಳವಣಿಗೆಗೆ ಗುರು ಶಿಷ್ಯ ಪಾತ್ರ ಅತಿ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ನಿವೃತ್ತ ಅರಣ್ಯಾಧಿಕಾರಿಗಳ ಸಂಘ ಉತ್ತಮ ಕೆಲಸ ಮಾಡುತ್ತಿದೆ. ವಿಧ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈ ಜೋಡಿಸೋಣ, ಇಂತಹ ಕಾರ್ಯಕ್ರಮಗಳನ್ನು ಸದಾ ಬೆಂಬಲಿಸುತ್ತೇನೆ. ಶಿವಾನಂದ ತೋಡಕರ ಡಿ ಎಪ್ ಓ (ಆರ್) ಪ್ರಿಂಟ್ ಮಾಡಿ ಪುಸ್ತಕ ಹಂಚಿದ್ದಾರೆ ಇದರ ಲಾಭ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ರಾಮನಗರ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾಜಿ ಗೋಸಾವಿ, ಇ ಓ ಭಾರತಿ ಎನ್, ಶಿವಾನಂದ ತೋಡಕರ ನಿವೃತ್ತ ಎಸಿಎಫ್, ಸಿ. ಕೆ ಗಾರವಾಡ, ನಿವೃತ್ತ.ಅರಣ್ಯ ಅಧಿಕಾರಿಗಳ ಸಂಘ ಧಾರವಾಡ, ಎಸ್ ಆರ್ ಸಾಳುಂಕೆ ಅಧ್ಯಕ್ಷ ನೌಕರರ ಸಂಘ ಜೊಯಿಡಾ, ಜಿ ಆರ್ ಭಟ್, ಮಾ.ಶಾ.ನೌ.ಸಂ, ಬಸಿರ ಅಹಮ್ಮದ ಬಿ ಇ ಓ , ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು..
