ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರದ BGVS ಪದವಿಪೂರ್ವ ಕಾಲೇಜಿನ ಎನ್‌.ಎಸ್‌.ಎಸ್‌ ಏಳು ದಿನಗಳ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು. BGVS ಪದವಿಪೂರ್ವ ಕಾಲೇಜಿನ
ಸತತ ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಬಿಜೆವಿಎಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಪವಾರ, ಸ್ಥಳೀಯ ಸಮಿತಿಯ ಅಧ್ಯಕ್ಷ ಗಜೆಂದ್ರ ಗಾಂಧಲೆ,ಸೂಪಾ ಗುಂಪುಗ್ರಾಮ ಸೇವಾ ಸಂಘ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಬಬ್ಲೇಶ್ವರ, ವ್ಯವಸ್ಥಾಪಕ ಸಾಗರ ಬಾನಾವಳಿ, ಕೆಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಸವರಾಜ ವಡ್ಡರ,ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಅನಿಲ್ ಕುಮಾರ್ ದೇವರ್ಷಿ, ಪ್ರಸನ್ನಕುಮಾರ, ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಎನ್‌.ಎಸ್‌.ಎಸ್‌. ಸ್ವಯಂಸೇವಕರು ಭಾಗಿಯಾಗಿದ್ದರು.


ಈ ಸಂದರ್ಭದಲ್ಲಿ ಮಂಜುನಾಥ ಪವಾರ ಅವರು ಮಾತನಾಡಿ,
ವಿದ್ಯಾರ್ಥಿಗಳಲ್ಲಿ ಶಿಸ್ತಿನೊಂದಿಗೆ ಸಂಘಟನಾ ಕೌಶಲ್ಯ, ನಾಯಕತ್ವ, ಸಹಿಷ್ಣುತೆ ಹಾಗೂ ವ್ಯಕ್ತಿತ್ವ ಅಭಿವೃದ್ಧಿಗೆ ಇಂತಹ ಶಿಬಿರಗಳು ಅತ್ಯಂತ ಉಪಯುಕ್ತ ಎಂದು ಹೇಳಿದರು.
ಅದೇ ರೀತಿ ಕೆಲಸ ಮಾಡಿದಾಗ ಮಾತ್ರ ಫಲ ದೊರಕುತ್ತದೆ ಎಂಬ ನುಡಿಗಟ್ಟಿನಂತೆ ಮಾತನಾಡುವುದಕ್ಕಿಂತ ಮೊದಲು ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಸವರಾಜ ವಡ್ಡರ್ ಅವರು ಮಾತನಾಡಿ,
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿ ನಿಗದಿಪಡಿಸಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಮಾಡಬೇಕು. ಇಂತಹ ಶಿಬಿರಗಳು ಅನೇಕ ಮಾರ್ಗಗಳನ್ನು ಪರಿಚಯಿಸುತ್ತವೆ ಎಂದರು. ಅಧ್ಯಕ್ಷತೆಯನ್ನುವಹಿಸಿದ್ದ ಗಜೆಂದ್ರ ಗಾಂಧಲೆ ಅವರು ಮಾತನಾಡಿ
ವಿದ್ಯಾರ್ಥಿಗಳೊಳಗಿನ ಕಲೆ, ಪ್ರತಿಭೆ ಮತ್ತು ಸಾಮರ್ಥ್ಯ ಹೊರತೆಗೆದು ಪ್ರೋತ್ಸಾಹಿಸಲು ಇಂತಹ ಶಿಬಿರಗಳು ಬಹಳ ಉಪಯುಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೈಶಿಷ್ಟ್ಯಗಳು:
ಕಾರ್ಯಕ್ರಮವು ಕುಮಾರಿ ಮಿಥಾಲಿ ಹಣಬರ ಮತ್ತು ತಂಡದವರಿಂದ ಪ್ರಾರ್ಥನಾ ಗೀತೆಯಿಂದ ಆರಂಭವಾಯಿತು.

ಕುಮಾರಿ ಶ್ವೇತಾ ದೇಸಾಯಿ ಮತ್ತು ತಂಡದವರು ಸ್ವಾಗತಗೀತೆ ಹಾಡಿದರು.
ಕುಮಾರಿ ಪೂನಂ ಪಾಟೀಲ ಅವರು ಅತಿಥಿಗಳ ಸ್ವಾಗತ ಹಾಗೂ ಪರಿಚಯ ಮಾಡಿಕೊಟ್ಟರು.
ಕುಮಾರಿ ಇಟಾ ಮಿರಾಶಿ ಅವರು ಶಿಬಿರವಾರ್ತೆಯನ್ನು ಮತ್ತು ಏಳು ದಿನಗಳ ಶಿಬಿರ ವರದಿಯನ್ನು ವಾಚಿಸಿದರು.
ಕುಮಾರಿ ಶ್ರೀವಾಣಿ ದಳವಿ ಅವರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುಮಾರಿ ಕಾಮಾಕ್ಷಿ ದಳವಿ ಅವರು ಅತ್ಯುತ್ತಮವಾಗಿ ನಿರೂಪಣೆ ಮಾಡಿದರು.
ಉತ್ತಮ ಶಿಬಿರಾರ್ಥಿಗಳ ಘೋಷಣೆ,ಈ ವರ್ಷದ ಉತ್ತಮ ಶಿಬಿರಾರ್ಥಿಗಳಾಗಿ:
ಕುಮಾರ ಮಯಾಂಕ್ ಕಾಂಬಳೆ.
ಕುಮಾರಿ ಶ್ರೀವಾಣಿ ದಳವಿ
ಇವರನ್ನು ಆಯ್ಕೆ ಮಾಡಲಾಯಿತು.
ಶಿಬಿರದ ಯಶಸ್ಸಿಗೆ ಸಹಕರಿಸಿದವರು:
ಈ ಶಿಬಿರ ಯಶಸ್ವಿಯಾಗಲು ಚಾಪಾಳಿ ಗ್ರಾಮದ ಜನರು, ಅಸು ಗ್ರಾಮಪಂಚಾಯತ ಅಧ್ಯಕ್ಷರು–ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ರಾಮನಗರ ಗ್ರಾಮಪಂಚಾಯತ ಅಧ್ಯಕ್ಷರು–ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪತ್ರಕರ್ತರು, ಮಾಧ್ಯಮಗಳು, ಮಹಿಳಾ ಮಂಡಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ (ಹನುಮಾನ ಲೈನ್), ಚಾಪಾಳಿಯ ಶಿಕ್ಷಕರು, ಮಾಜಿ ಶಿಬಿರಾರ್ಥಿಗಳು, ಸಮಾಜಸೇವಕರು, ಆರೋಗ್ಯ, ಕೃಷಿ, ಪೊಲೀಸ್, ಅರಣ್ಯ ಇಲಾಖೆಗಳು, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷರು, ಹಾಗೂ ಬಿಜೆವಿಎಸ್ ಸ್ಥಳೀಯ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಮೂಲ್ಯವಾದ ಸಹಕಾರವನ್ನು ಶಿಬಿರದ ಯಶಸ್ಸಿಗೆ ನೀಡಿದರು.
ದೀಪೋತ್ಸವ:
ಕಾರ್ಯಕ್ರಮದ ಕೊನೆಯಲ್ಲಿ ಸಾಯಂಕಾಲ ದೀಪೋತ್ಸವ ಕಾರ್ಯಕ್ರಮ ಸುಂದರವಾಗಿ ನೆರವೇರಿತು.