ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸಿಂಗರಗಾಂವ ಮಾರ್ಗದಲ್ಲಿ ಟ್ರಕ್ ಪಲ್ಟಿಯಾದ ಪರಿಣಾಮ ಚಾಲಕ ಅಪಾಯದಿಂದ ಪಾರಾದ ಘಟನೆ ಮಂಗಳವಾರ ನಡೆದಿದೆ.
ಸಿಂಗರಗಾಂವ ಮಾರ್ಗವಾಗಿ ಗೋವಾದಿಂದ ದಾಂಡೇಲಿ ಕಡೆಗೆ ಹೊರಟಿದ್ದ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ,ಟ್ರಕ್ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಅಪಘಾತದಲ್ಲಿ ಟ್ರಕ್ ನ ಚಾಲಕ ಶಾಹಿದ್ ನಾಯಕವಾಡಿ ಗಂಭೀರ ಸ್ವರೂಪದ ಗಾಯಗೊಂಡು ಟ್ರಕ್ ನೊಳಗೆ ಸಿಲುಕಿಕೊಂಡಿದ್ದು,ಟ್ರಕ್ ನ ಕ್ಯಾಬಿನ್ ಸಂಪೂರ್ಣ ಜಖಂ ಗೊಂಡಿದ್ದರಿಂದ ಸ್ಥಳೀಯರು ಹಾಗೂ ರಕ್ಷಣಾ ತಂಡದವರು ಆಗಮಿಸಿ ಸತತ ಗಂಟೆಗಳ ಕಾಲ ಶ್ರಮಿಸಿ,ಟ್ರಕ್ ನ ಭಾಗಗಳನ್ನು ತೆರವುಗೊಳಿಸಿ ಚಾಲಕನನ್ನು ಹೊರ ತೆಗೆದಿದ್ದಾರೆ.
ನಂತರ ಗಂಭೀರ ಸ್ವರೂಪದ ಗಾಯಗೊಂಡ ಚಾಲಕನನ್ನು 108 ಅಂಬ್ಯುಲೆನ್ಸ್ ಮೂಲಕ ರಾಮನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಈ ಸಂಬಂಧ ರಾಮನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
