ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಬಿಜಿವಿಎಸ್ ಪದವಿಪೂರ್ವ ಕಾಲೇಜು ರಾಮನಗರದಲ್ಲಿ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಯಶಸ್ವಿ ಸಂಪನ್ನ ಗೊಂಡಿತು .
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥ ನಾಯಕ ಸಮಾಜ ಸೇವಕರು ರಾಮನಗರ, ಅನಿಲ ಕುಮಾರ ದೇವರ್ಸಿ ಪ್ರಾಚಾರ್ಯರು ಪದವಿ ಬಿ.ಜಿ.ವಿ.ಎಸ್ ರಾಮನಗರ, ಪ್ರೇಮಾನಂದ ಎಸ್.ಪರಬ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ರಾಮನಗರ. ಎನ್ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಮಲ್ಲಿಕಾರ್ಜುನ ಎಸ್ ಕಮ್ಮಾರ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಶಿಬಿರದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾರ್ಥನೆಯನ್ನು ಕುಮಾರಿ ಅಂಜಲಿ ಸಂಗಡಿಗರಿಂದ ನಡೆಯಿತು.ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮಲ್ಲಿಕಾರ್ಜುನ ಕಮ್ಮಾರ ಎನ್ಎಸ್ಎಸ್ ವಿಶೇಷ ಶಿಬಿರದ ವರದಿ ವಾಚನ ಮಾಡಿದರು. ಅತಿಥಿಗಳ ಸ್ವಾಗತವನ್ನು ನಿರೂಪಣೆಯನ್ನು,ವಂದನಾರ್ಪಣೆಯನ್ನು ಶಿಬಿರಾರ್ಥಿಗಳು ಮಾಡಿದರು. ಉಚಿತ ನೇತ್ರ ತಪಾಸಣೆಯ ಶಿಬಿರವನ್ನು ಡಾ.ಮಾರುತಿ ಚಿನ್ನಪ್ಪನವರ್,ನೇತ್ರಾಧಿಕಾರಿಗಳು ತಾಲೂಕಾ ಆಸ್ಪತ್ರೆ ಮುಂಡಗೋಡ, ರಾಜು ಎಸ್ ಕಡಕೋಳ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆ ರಾಮನಗರ ನಡೆಸಿಕೊಟ್ಟರು.
