ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಕನ್ನಡ ಶಾಲೆಗಳು ಮುಚ್ಚಿ ಹೋದರೆ ಗತಿಯೇನು ?…. ಹೌದು ಇಂತದ್ದೋoದು ಸುದ್ದಿ ತಾಲೂಕಿನ ಜನರ ನಿದ್ದೆ ಕೆಡಿಸಿದೆ ಶಿಕ್ಷಣ ಇಲಾಖೆ ಯ. ವಿಷಯ ದಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ತಾಲೂಕಿನಲ್ಲಿ ಇರುವ 162 ಕನ್ನಡ ಶಾಲೆಗಳ ಪೈಕಿ ಸುಮಾರು 90 ಶಾಲೆ ಗಳಲ್ಲಿ 15ಕ್ಕಿಂತ ಕಡಿಮೆ ವಿದ್ಯಾರ್ಥಿ ಗಳು ಇರುವುದು ಕಂಡು ಬಂದಿದೆ .
ಇದರಿಂದ ಈ 90 ಶಾಲೆ ಗಳು ಮುಚ್ಚಿ ಹೋದರೆ ಸಾಮಾನ್ಯ ಜನರ ಶಿಕ್ಷಣದ ಗತಿಯೇನು ಎಂಬ ಚಿಂತೆ ಜನ ರನ್ನು ಕಾಡಿದೆ. ರಾಜ್ಯದಲ್ಲಿನ ಪ್ರಾಥಮಿಕ ಶಿಕ್ಷಣದ ಸುಧಾರಣೆಗೆ ಸರಕಾರ ಕೆಲವು ಯೋಜನೆ ತಯಾರಿ ಸುತ್ತಿದ್ದು ಅದಕ್ಕನುಗುಣ ವಾಗಿ ಈ ಮಾಹಿತಿ ಪಡೆಯಲಾಗುತ್ತಿದೆಯೇ ಎಂಬ ವಿಚಾರ ಕೂಡ ಚರ್ಚೆ ಆಗುತ್ತಿದೆ. ಅದೇನೇ ಇದ್ದರೂ ತಾಲೂಕಿನಲ್ಲಿ ಶಾಲೆಗಳ ಅನುಗುಣಕ್ಕೆ ಮಂಜೂರಿ ಶಿಕ್ಷಕರ ಸಂಖ್ಯೆ 432 ಇದೆ ಆದರೆ ಇರುವ ಶಿಕ್ಷಕರ ಸಂಖ್ಯೆ 178 ಒಟ್ಟಾರೆ 254 ಶಿಕ್ಷಕರ ಕೊರತೆ ಇದೆ ಅದರಲ್ಲಿ 157 ಗೌರವ ಶಿಕ್ಷಕರನ್ನು ಪಡೆದು ಕೊಂಡು ಶಿಕ್ಷಣ ಇಲಾಖೆ ಕನ್ನಡ ಶಾಲೆ ಗಳನ್ನುನಡೆಸುತ್ತಿದೆ ಆದರೂ 97 ಶಿಕ್ಷಕರ ಕೊರತೆ ಇದೆ. ಇನ್ನು ಕೆಲವರು ವರ್ಗಾವಣೆ ಬಯಸಿದ್ದು ಅವರ ವರ್ಗಾವಣೆ ಆದರೆ ಇನ್ನಷ್ಟು ಶಿಕ್ಷಕರ ಕೊರತೆ ಆಗುವುದರಲ್ಲಿ ಸಂದೇಹವಿಲ್ಲ .
ಶಾಲೆಗಳು ಮುಚ್ಚಲು ಕಾರಣ ಗಳು ಹಲವಾರು ಎಂದು ಹೇಳಲಾಗುತ್ತಿದೆ ಗ್ರಾಮೀಣ ಬಾಗಗಳಲ್ಲಿ ಇರುವ ಸಣ್ಣ ಮಕ್ಕಳನ್ನು ವಸತಿ ನಿಲಯ ಗಳಲ್ಲಿ ಸೇರ್ಪಡೆ ಮಾಡಲಾಗುತ್ತಿದೆ ವಸತಿ ನಿಲಯಗಳು ಹಳ್ಳಿ ಗಳಲ್ಲಿ ಇರುವುದಿಲ್ಲ ಅವು ಇರುವಲ್ಲಿ ಮಕ್ಕಳು ಸೇರಿದಾಗ ಹಳ್ಳಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಯಾಗುತ್ತಿವೆ ಆಗ ಇಂತ ಶಾಲೆಗಳಿಗೆ ಶಿಕ್ಷಕರೂ ಸರಿಯಾಗಿ ಬರುವುದಿಲ್ಲ ಇದನ್ನು ಮನಗಂಡು ಕೆಲವು ಪಾಲಕರು ತಮ್ಮ ಮಕ್ಕಳನ್ನು ಬೇರೆ ಬೇರೆ ತಾಲೂಕಿಗೆ ಕಳಿಸುತ್ತಿದ್ದಾರೆ ಹೆಚ್ಚಿನ ಪಾಲಕರು ಕಾರವಾರ ತಾಲೂಕಿನ ಸಿದ್ದರ, ಅಸ್ನೋಟಿ ಸೇರಿದಂತೆ ವಿವಿದೆಡೆ ಕಳಿಸುತ್ತಿದ್ದಾರೆ ಈ ಕೆಲಸಕ್ಕೆ ಶಿಕ್ಷಣ ಇಲಾಖೆ ಕೂಡ ವಿದ್ಯಾರ್ಥಿಗಳ ಪ್ರಮಾಣ ಪತ್ರ ಕೊಡಲು ಸಹಕರಿಸುತ್ತಿರುವ ಕಾರಣ ವಾಗಿ ಗ್ರಾಮೀಣ ಶಾಲೆಗಳಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆ ಯಾಗುತ್ತಿದೆ ಎಂದು ಹೇಳ ಲಾಗುತ್ತಿದೆ ಇದು ನಿಜವೂ ಕೂಡ ಆಗಿದೆ.
ಸರಕಾರ ಗ್ರಾಮ ಪಂಚಾಯತ ಮಟ್ಟದಲ್ಲಿ ಅಂಗನವಾಡಿಯಿಂದ ಪ್ರೌಢ ಶಿಕ್ಷಣದ ವೆರೆಗೆ ಶಾಲೆ ವಸತಿ ನಿಲಯ ಅಡುಗೆ ಕೋಣೆ ಗಳನ್ನು ನಿರ್ಮಿಸಿ ಉತ್ತಮ ಯೋಜನೆ ನಿರ್ಮಿಸಿದರೆ ಮಾತ್ರ ಪ್ರಾಥಮಿಕ ಶಿಕ್ಷಣ ಉತ್ತಮ ವಾಗಲು ಸಾಧ್ಯ ಎಂಬ ನಂಬಿಕೆ ಜನರಿಂದ ಕೇಳಿ ಬರುತ್ತಿದೆ
