ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಚಾಪಾಳಿ ಗ್ರಾಮದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಬಸ್ ಸಂಚಾರ ಆರಂಭಿಸಿದ್ದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಸು ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ,ದಿನನಿತ್ಯದ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಬಸ್ ಗೆ ಬಾಳೆ ಗಿಡ,ಹೂ ಮಾಲೆಯಿಂದ ಶೃಂಗರಿಸಿ ಗ್ರಾಮದ ಹಿರಿಯರು ಪೂಜೆ ಸಲ್ಲಿಸಿ,ಚಾಲಕ ಹಾಗೂ ನಿರ್ವಾಹಕರನ್ನು ಶಾಲು ಹೊದಿಸಿ,ಹೂ ಮಾಲೆ ಹಾಕಿ ಸನ್ಮಾನಿಸಿ ಭವ್ಯವಾಗಿ ಸ್ವಾಗತಿಸಲಾಯಿತು. ಚಾಪಾಳಿ ಗ್ರಾಮಕ್ಕೆ ಅಸು ಮಾರ್ಗವಾಗಿ ಬಸ್ ಸಂಚಾರ ಸೇವೆ ಹೊಸದಾಗಿ ಆರಂಭಿಸಿದ್ದಕ್ಕೆ ಗ್ರಾಮಸ್ಥರು ಮಾನ್ಯ ಶಾಸಕರಿಗೆ, ತಾಲೂಕಾ ಆಡಳಿತ,ಸಾರಿಗೆ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾರುತಿ ಗಾವಡೆ,ಊರಿನ ಗಣ್ಯರು, ಹಿರಿಯರು, ಯುವಕರು,ಮಕ್ಕಳು ಇದ್ದರು.
