ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಬಿಜಿವಿಎಸ್ ಪದವಿಪೂರ್ವ ಕಾಲೇಜು ರಾಮನಗರದ NSS ವಿಶೇಷ ಶಿಬಿರದ ಕಾರ್ಯಚಟುವಟಿಕೆ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಚಾಪಾಳಿ ಗ್ರಾಮದ ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ ಪಂಡಿತ,ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷರು, ಮಾರುತಿ ಗಾವಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜೋಯಿಡಾ,ಅರಣ್ಯ ಇಲಾಖೆಯ ಅಧಿಕಾರಿಗಳು, ಪೋಲಿಸ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಪಂಚಾಯತದ ಅಧಿಕಾರಿ ವರ್ಗ,ಕೃಷಿ ಇಲಾಖೆ,ಅಂಗನವಾಡಿ ಕಾರ್ಯಕರ್ತೆ, ಬಿ.ಜಿ.ವಿ.ಎಸ್ ರಾಮನಗರ, ಪ್ರೇಮಾನಂದ ಎಸ್.ಪರಬ ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು ರಾಮನಗರ. ಎನ್ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಮಲ್ಲಿಕಾರ್ಜುನ ಎಸ್ ಕಮ್ಮಾರ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವದರ ಮೂಲಕ ಗಣ್ಯರು ಆ ದಿನದ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಶಿಬಿರದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮೇಘನಾ ಆರ್. ನಾಯ್ಕ ನೆರವೇರಿಸಿದರು. ಪ್ರಾರ್ಥನೆಯನ್ನು ಕುಮಾರಿ ಅಂಜಲಿ ಸಂಗಡಿಗರಿಂದ ನಡೆಯಿತು.ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮಲ್ಲಿಕಾರ್ಜುನ ಕಮ್ಮಾರ ಎನ್ಎಸ್ಎಸ್ ವಿಶೇಷ ಶಿಬಿರದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಎಲ್ಲಾ ಚಟುವಟಿಕೆಗಳಿಗೆ ಚಾಪಾಳಿ ಗ್ರಾಮದ ಮಹಿಳೆಯರು, ಪುರುಷರು,ಯುವಕರು,ಯುವತಿಯರುಸೇರಿದಂತೆ ಶಾಲೆಯ ಶಿಕ್ಷಕರು,ಮಕ್ಕಳು ಸಹಕಾರ ನೀಡಿದರು.
