ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಬಾಳೆ ಸಸಿ ಮತ್ತು ಮಾವಿನ ಸಸಿ ನರ್ಸರಿ ಪ್ಲಾಂಟೇಶನ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ವಿಜಯ ಪಂಡಿತ್ ಉಪಾಧ್ಯಕ್ಷರು ಆಸು ಗ್ರಾಮ ಪಂಚಾಯತ್ ಇವರು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು .

ಶ್ರೀ ಮಾರುತಿ ಪಾಟೀಲ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಜೋಯಿಡಾ ಇವರು ಫಲಾನುಭವಿಗಳಿಗೆ ಸರ್ಕಾರದ ಇಲಾಖೆ ಸಹಾಯಧನವನ್ನು ಪಡೆದುಕೊಳ್ಳಿ ಎಂದು ಹೇಳಿದರು ಶ್ರೀ ಅಬ್ದುಲ್ ದಳವಾಯಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಬಾಳೆ ಸಸಿ ಮತ್ತು ಮಾವಿನ ಸಸಿ ನರ್ಸರಿ ಪ್ಲಾಂಟೇಶನ್ ಮಾಡುವ ವಿಧಾನವನ್ನು ತರಬೇತಿಯಲ್ಲಿ ತಿಳಿಸಿದರು ಅಲ್ಲದೆ ಅಡಿಕೆ ಸಸಿ, ದಾಲ್ಚಿನ್ನಿ, ಕಾಳುಮೆಣಸು ಇತರೆ ತೋಟಗಾರಿಕೆ ಬೆಳೆಗಳಿಗೆ ಸಿಗುವ ಸೌಲಭ್ಯಗಳು ಮಾಹಿತಿ ನೀಡಿದರು ಪ್ರಾಸ್ತವಿಕವಾಗಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಮಾತನಾಡಿದರು ಶ್ರೀ ಮನೋಹರ್ ಚವರಿಯವರ್ ಕ್ಷೇತ್ರ ಮೇಲ್ವಿಚಾರಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು.