ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಕಳೆದ ತಿಂಗಳು ತಾಲೂಕಿನ ಪ್ರೇರಣಾ ಸಂಸ್ಥೆ ರಾಜ್ಯ ಮಟ್ಟದ ಆನ್ ಲೈನ್ ಸಂಗೀತ ಸ್ಪರ್ಧೆ ಏರ್ಪಡಿಸಿತ್ತು ಆ ಸ್ಪರ್ಧೆಗಳಲ್ಲಿ ವಿಜೇತ ರಾದ ಸ್ಪರ್ಧಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ದಾಂಡೇಲಿ ಯ ಕಾರ್ಮಿಕ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ವನ್ನು ಹಳಿಯಾಳ. ಜೋಯಿಡಾ ಶಾಸಕ ರಾದ ಆರ್ ವಿ ದೇಶಪಾಂಡೆ ಉದ್ಘಾಟಸಿ ಮಾತನಾಡಿ, ಕಲೆ, ಕಲಾವಿದರನ್ನು ಬೆಳೆಸುವಲ್ಲಿ ಜೋಯಿಡಾ ದ ಪ್ರೇರಣಾ ಸಂಸ್ಥೆ ಕ್ರಿಯಾಶೀಲ ವಾಗಿ ಕಾರ್ಯ ನಡೆಸುತ್ತಿದೆ, ಈ ಸಂಸ್ಥೆ ಇನ್ನಷ್ಟು ಬೆಳೆದು ಇನ್ನೂ ಹಲವಾರು ಜನರಿಗೆ ಮಾರ್ಗದರ್ಶನ ಮಾಡಲಿ ಎಂದು ಹೇಳಿ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಗಳನ್ನು ವಿತರಿಸಿದರು. ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ದೇಸಾಯಿ ಕಾರ್ಯಕ್ರಮ ದ ಉದ್ದೇಶ ವಿವರಿಸಿ ಮಾತನಾಡಿದರು.

ಗಣ್ಯರಿಂದ ಕಾರ್ಮಿಕರಿಗೆ ಕಾರ್ಮಿಕ ಕಿಟ್ಟ ವಿತರಣೆ ನಡೆಯಿತು ವೇದಿಕೆಯಲ್ಲಿ ದಾಂಡೇಲಿ ನಗರ ಸಭೆಯ ಅಧ್ಯಕ್ಷ ಆಸ್ಪಖ ಶೇಖ, ತಹಸೀಲ್ದಾರ್ ಶೈಲೇಶ್ ಪರಮಾನಂದ, ಇ ಓ ಟಿ ಸಿ ಹಾದಿಮನಿ ನಗರ ಸಭಾ ಆಯುಕ್ತರು ವಿವೇಕ್ ಬೆಣ್ಣೆ, ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಮತ್ತು ಕಾರ್ಮಿಕ ಇಲಾಖೆ ಯ ಚೇತನ ಕುಮಾರ್ ಇತರರು ಉಪಸ್ಥಿತರಿದ್ದರು. ನಾಡಗೀತೆ ಯೊಂದಿಗೆ ಆರಂಭ ವಾದ ಕಾರ್ಯಕ್ರಮ ವನ್ನು ಸಂಸ್ಥೆಯ ಸೀತಾ ದಾನಗೇರಿ, ಮಂಗಲಾ ಉಪಾಧ್ಯ ಉಷಾ ದೇಸಾಯಿ ಇತರರು ನಡೆಸಿ ಕೊಟ್ಟರು