ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾನಾಯಿ ಗೌಳಿವಾಡಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನದಡಿಯಲ್ಲಿ ಶಾಲಾ ಮಕ್ಕಳು ಹಾಗೂ ಸ್ಥಳೀಯ ಯುವಕ,ಯುವತಿಯರಿಂದ ಕಾವ್ಯ ವಾಚನ,ಕಾವ್ಯ ಗಾಯನ ಹಾಗೂ ಗೀತ ನೃತ್ಯ ಕಾರ್ಯಕಮ ಗುರುವಾರ ದಿನಾಂಕ 27 ರಂದು ಸಾಯಂಕಾಲ 6ಗಂಟೆಯಿಂದ ರಾತ್ರಿ 9 ಗಂಟೆವರೆಗೂ ನಡೆದು ಯಶಸ್ಸು ಕಂಡಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಸ್ಥಳಿಯ ಗ್ರಾಮ ಪಂಚಾಯತ ಸದಸ್ಯರು ಊರ ಗಣ್ಯರು ಪಾಲ್ಗೊಂಡು ಶಾಲಾ ಮಕ್ಕಳ ಹಾಗು ಯುವಕರ ಕನ್ನಡ ಗೀತ ಗಾಯನ, ನೃತ್ಯ ಪ್ರದರ್ಶನ ವೀಕ್ಷಿಸಿ, ಸಂತಷ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗವಾದ ಮನಾಯಿ ಗೌಳಿವಾಡಾದಂತ ಹಿಂದುಳಿದ ಪ್ರದೇಶದಲ್ಲಿ ಎಂದು ನಡೆಯದಂತ ಇಂತಹ ಅದ್ದೂರಿಯಾದ ಕಾರ್ಯಕ್ರಮ ನಡೆಸಿದಕ್ಕೆ ಗ್ರಾಮಸ್ಥರು ಕಸಾಪ ಜೋಯಿಡಾಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಗೌಳಿವಾಡಾ, ಮಾನಾಯಿ, ಚಾವರ್ಲಿ ಶಾಲೆಗಳ ಒಟ್ಟೂ 50 ಕ್ಕೂ ಹೆಚ್ಚು ಶಾಲಾ ಮಕ್ಕಳು ನೃತ್ಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಕನ್ನಡ ಶಾಲು ಹಾಕಿ ಬಹುಮಾನ ವಿತರಿಸಲಾಯಿತು.
ಗ್ರಾಮದ ಪುರುಷ, ಮಹಿಳೆಯರಿಗಾಗಿ ಸಂಗೀತ ಕುರ್ಚಿ, ವೃತ್ತದಲ್ಲಿ ಚುಕ್ಕೆ ಗುರುತಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆಯನ್ನು ನಡೆಸಿದ್ದು, ಐವತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕನ್ನಡ ಕಾರ್ಯಕ್ರಮದ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪರಿಷತ್ತಿನ ಕಾರ್ಯಕ್ರಮಕ್ಕೆ ಅಭಿಮಾನದಿಂದ ಸಹಕರಿಸುವ ಮತ್ತು ಬೆಂಬಲಿಸುವುದಾಗಿ ಭರವಸೆ ನೀಡಿದರು.
