ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಉಚಿತ ಹೊಲಗೆ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿನಾಯಕ್ ಚೌಹಾನ್ ಯೋಜನಾ ಸಂಯೋಜಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರು ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡುತ್ತಾ ಶಿಬಿರಾರ್ಥಿಗಳಿಗೆ ಟೈಲರಿಂಗ್ ತರಬೇತಿ ಒಳ್ಳೆಯ ತರಬೇತಿ ಸಮಾಜದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಬೇತಿ ನೀವು ಹೊಸ ಹೊಸ ವಿನ್ಯಾಸಗಳನ್ನು ಹೊಲಿಯುವುದರಿಂದ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆ ಮೇಲೆ ಶ್ರೀಪತಿಯ ಶಿವಾನಂದ ನಾಯಕ ಊರಿನ ಪ್ರಮುಖ ಹಿರಿಯರು,ಶ್ರೀಮತಿ ದೀಕ್ಷಿತಾ ವೆಲಿಪ್ ಸಂಪನ್ಮೂಲ ವ್ಯಕ್ತಿ .ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಇವರುಉಪಸ್ಥಿತರಿದ್ದು ಮಾತನಾಡಿದರು. ಮಂಜುನಾಥ್ ಸಾವಂತ್ ಸಮುದಾಯ ಸಂಘಟಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಕಾರ್ಯಕ್ರಮವನ್ನು ಆಯೋಜಿಸಿ ವಂದಿಸಿದರು.
