ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಪ್ರೌಢಶಾಲೆಯಲ್ಲಿ ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ವಿಠ್ಠಲದಾಸ ಕಾಮತ ಇವರು ಮಕ್ಕಳಿಗೆ ಪತ್ರಿಕೆ ಏಕೆ ಓದಬೇಕು ಎಂಬ ಒಂದು ಪ್ರಬಂಧ ಸ್ವರ್ಧೆ ಏರ್ಪಡಿಸಿದ್ದರು.

ಅದರಂತೆ ಉಳವಿ ಪ್ರೌಢಶಾಲೆಯ ಅಕ್ಷಯ ಮಂಜುನಾಥ ಚಕ್ರಸಾಲಿ ಮೊದಲನೆ ಬಹುಮಾನ, ಪ್ರತಿಕ್ಷಾ ಡಮ್ಮಣಗಿಮಠ, ಮೆಹ್ತಾಬ ಹಮೀದ ಖಾನ್ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು.
ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಬಹುಮಾನ ನೀಡಿದ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾದ ವಿಠ್ಠಲದಾಸ ಕಾಮತ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ, ಕಾರ್ಯದರ್ಶಿ ಹರೀಶ್ ಭಟ್ಟ, ಸದಸ್ಯರಾದ ಟಿ.ಕೆ ದೇಸಾಯಿ, ಶಾಲೆಯ ಮುಖ್ಯೋಪಾಧ್ಯಾಯ ಎಸ್ ಆರ್ ನರಸಣ್ಣನವರ, ಹಾಗೂ ಶಾಲೆಯ ಇತರ ಶಿಕ್ಷಕರು ಉಪಸ್ಥಿತರಿದ್ದರು.