ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ಶಂಕರ ಮನೋಹರ ಕಿಲ್ಲೇಕರ ರವರಿಗೆ ರೋಟರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ದಾಂಡೇಲಿ ವತಿಯಿಂದ 2025 ನೇ ಸಾಲಿನ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ಹಲವು ವರ್ಷಗಳಿಂದ ಹಿಂದಿ ಭಾಷಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸಿದ ಇವರ ಸಾಧನೆಗೆ ಈ ಪ್ರಶಸ್ತಿಯು ಒಲಿದು ಬಂದಿದೆ. ಸಾಹಿತಿಯಾಗಿಯೂ ಇವರು ಹಲವು ತಾಲೂಕು ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ , ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದು ಇಲ್ಲಿ ಸ್ಮರಿಸಬಹುದು.

ಈ ಸಮಯದಲ್ಲಿ ರೋಟರಿ ಜಿಲ್ಲಾ ಪ್ರಾಂತಪಾಲ ಅರುಣ್ ಭಂಡಾರಿ ರೋಟರಿ ಕ್ಲಬ್ ದಾಂಡೇಲಿ ಅಧ್ಯಕ್ಷರಾದ ಅಶುತೋಷ್ ಕುಮಾರ್ ರಾಯ್ ,ಆರ್ ಪಿ ನಾಯ್ಕ ರಾಹುಲ್ ಬಾವಾಜಿ ಹಾಗೂ ರೋಟರಿ ಕ್ಲಬ್ ನ ಪ್ರಮುಖರು ಹಾಜರಿದ್ದರು.
