ಸುದ್ದಿ ಕನ್ನಡ ವಾರ್ತೆ
2025-26 ನೆ ಶೈಕ್ಷಣಿಕ ವರ್ಷದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟವು ಎಂ .ಎಸ್ .ರಾಮಯ್ಯ ಪದವಿ ಪೂರ್ವ ಕಾಲೇಜು ಬೆಂಗಳೂರಿನಲ್ಲಿ ನಡೆದಿದ್ದು, ಕೆನರಾ ಎಕ್ಸಲೆನ್ಸ್ ಕಾಲೇಜು ಗೋರೆಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಬಾಲಕಿಯರ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ .
ಇವಳು ಮೂಲತಹ ಕುಮಟಾದ ಹೆಗಡೆಯ ಶ್ರೀ ನಾಗರಾಜ ಹೆಗಡೆ ಹಾಗೂ ಶ್ರೀಮತಿ ರೇಣುಕಾ ದಂಪತಿಗಳ ಪುತ್ರಿಯಾಗಿದ್ದಾಳೆ.ಇವಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ ಹೆಗಡೆಯವರು , ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಡಿ .ಎನ್ . ಭಟ್ಟ , ಪ್ರಾಚಾರ್ಯರಾದ ಶ್ರೀ ನಾಗರಾಜ್ ಹೆಗಡೆ, ಆಡಳಿತಾಧಿಕಾರಿಗಳಾದ ಶ್ರೀ ಶಶಾಂಕ ಶಾಸ್ತ್ರಿ, ಕ್ರೀಡಾ ಸಂಚಾಲಕರಾದ ಶ್ರೀ ಗಣಪತಿ ಭಟ್ಟ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಮುಂದಿನ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಶುಭ ಕೋರಿದ್ದಾರೆ.
