ಸುದ್ದಿ ಕನ್ನಡ ವಾರ್ತೆ

ಶಿರಸಿ: ಕೊಯಿಮುತ್ತೂರು ಹಿಸಾರ್ ಎಕ್ಸ ಪ್ರೆಸ್ ರೈಲನ್ನು ಕುಮಟಾದಲ್ಲಿ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಇಲಾಖೆ ಸೂಚಿಸಿದೆ‌ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ರೈಲು ಸಂಖ್ಯೆ 22 475 ಮತ್ತು 22 476 ಕೊಯಿಮುತ್ತೂರು ಹಿಸಾರ್ ಎಕ್ಸ ಪ್ರೆಸ್ ರೈಲನ್ನು ಕುಮಟಾದಲ್ಲಿ ನಿಲ್ಲಿಸುವಂಯೆ
ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಪ್ರತಿಕ್ರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ ಸೋಮಣ್ಣ ಅವರು ತಕ್ಷಣ ಸ್ಪಂದಿಸಿ ರೈಲು ನಿಲುಗಡೆಗೆ ಆದೇಶ ಹೊರಡಿಸಿದ್ದಾರೆ ಎಂದಿದ್ದಾರೆ.

ಮನವಿಯನ್ನು ಸ್ವೀಕರಿಸಿ ಆದೇಶ ಹೊರಡಿಸಿದ ಸಚಿವದ್ವಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ರೈಲು ಕುಮುಟದಲ್ಲಿ ನಿಲುಗಡೆ ಮಾಡುವುದರಿಂದ ಉತ್ತರ ಕನ್ನಡ ಜಿಲ್ಲೆಯ ಜನರು, ಪ್ರವಾಸಿಗರಿಗೆ ಅನುಕೂಲ ಆಗಲಿದೆ. ಎಂದಿನಿಂದ‌ ನಿಲುಗಡೆ ಆಗಲಿದೆ ಎಂಬುದು ಚರ್ಚೆಯ ಬಳಿಕ ತೀರ್ಮಾನವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.