ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಕ್ಕೆ ನೀರು ಪೂರೈಸುವ ಹುಡಸಾ ದಲ್ಲಿ ನಾಳೆ ಸ್ವಚ್ಛತಾ ಕಾರ್ಯ ತಾಲೂಕಾ ಕೇಂದ್ರ ಜೋಯಿಡಾ ಕ್ಕೆ ಕುಡಿಯುವ ನೀರು ಪೂರೈಸುವ ಹುಡಸಾ ಜರಿನೀರು ಕೊಳದಲ್ಲಿ ಕಲ್ಮಶ ಮತ್ತು ಸಿಮೆಂಟ್, ಕಬ್ಬಿಣದ ಜಂಗು ತುಂಬಿದ ಕಂದು ಬಣ್ಣದ ನೀರು ತುಂಬಿ ರುವ ಕಾರಣ ಜನರ ಆರೋಗ್ಯದಲ್ಲಿ ಏರು ಪೇರಾಗುವ ಮೊದಲೇ ಶುಚಿ ನೀರನ್ನು ನಾಗರಿಕ ರಿಗೆ ಪೂರೈಸಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದರು.
ಈ ಹಿನ್ನಲೆಯಲ್ಲಿ ಜೋಯಿಡಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಉಪಾಧ್ಯಕ್ಷರು,ಸದಸ್ಯರು ಸ್ಥಳಕ್ಕೆ ಬೇಟಿ ನೀಡಿ ನಾಳೇನೇ ಸ್ವಚ್ಛತಾ ಕಾರ್ಯ ಕೈಕೊಳ್ಳಲು ನಿರ್ಧರಿಸಿದ್ದಾರೆ. ಜೋಯಿಡಾ ಜನತೆಗೆ ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯತ ಪ್ರತಿ ವರ್ಷ ಹರಸಾಹಸ ಪಡುತ್ತಿದೆ ಆದರೆ ಜೋಯಿಡಾ ದ ಕಾಳಿ ನದಿಯಿಂದತಾಲೂಕಿನ ಹೊರಗೆ ಜಿಲ್ಲೆಯ ಹೊರಗೆ ನಿರಂತರ ನೀರು ಪೂರೈಕೆ ಆಗುತ್ತಿದೆ ಈ ಬಗ್ಗೆ ತಾಲೂಕಿನ ರಾಜಕಾರಣಿಗಳು ನಮ್ಮ ಜನರ ಬಗ್ಗೆ ಸ್ವಲ್ಪವೂ ಅನುಕಂಪ ತೋರಿಸಲಿಲ್ಲ ಅನುಕಂಪ ತೋರಿಸಿದ್ದಿದ್ದರೆ ಹೊರಗಿನ ಜನರಿಗೆ ಕೊಡುವಾಗ ನಮಗೂ ನಮ್ಮ ಜನರಿಗೂ ಕುಡಿಯುವ ನೀರು ಪೂರೈಸಬಹುದಿತ್ತು.
ಮುಂದೆಯೂ ಕೂಡ ತಾಲೂಕಿನ ಜನಪ್ರತಿನಿದಿ ಗಳು ಬಾಯಿ ಮುಚ್ಚಿಕುಳಿತರೆ ತಾಲೂಕಿಗೆ ಆಗಬೇಕಾದ ನ್ಯಾಯಾಲಯ, ಬಸ್ ಡಿಪೋ ಸಬ್ ರಜೀಸ್ಟಾರ್ ಕಚೇರಿ ಸೇರಿದಂತೆ ಯಾವದೂ ಆಗುವುದಿಲ್ಲ . ಮುಂದಿನ ಎಲ್ಲ ಚುನಾವಣೆ ಯಲ್ಲಿ ಕೆಲಸ ಮಾಡುವ ಜನಪ್ರತಿನಿದಿಗಳನ್ನೇ ಜನರು ಆಯ್ಕೆ ಮಾಡಿಕೊಳ್ಳ ಬೇಕಾಗಿದೆ ಕರತುಂಬುವ ಜನರಿಗೆ ಕಲ್ಮಶ ನೀರು ಪೂರೈಕೆ ಆಗಬಾರದು ಎನ್ನುವ ಹಿನ್ನೆಲೆ ಯಲ್ಲಿ ಜನರು ದೂರಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ ನಿಧಿ ಯಿಂದ ನಾಲ್ಕು ಲಕ್ಷ, ನಲವತ್ತು ನಾಲ್ಕು ಸಾವಿರ ದ ಯೋಜನೆ ತಯಾರಿಸಿದ್ದಾರೆ ಎಂದು ತಿಳುದು ಬಂದಿದೆ ಜನರ ಭಾವನೆ ಗಳಿಗೆ ಕೂಡಲೇ ತಾಲೂಕು ಪಂಚಾಯತದ ಕಾರ್ಯನಿರ್ವಾಹಣಾಧಿಕಾರಿ ಗಳಾದ ಭಾರತಿ ಎನ್ ಅವರು ಸ್ಪಂದಿಸಿದ್ದಾರೆ ಗ್ರಾಮ ಪಂಚಾಯತ ದವರು ನಾಳೇನೇ ಸ್ವಚ್ಛತಾ ಕಾರ್ಯಕ್ರಮ ಕೈಕೊಳ್ಳಲು ಅವರು ಕಾರಣ ರಾಗಿರುತ್ತಾರೆ. ಎಂದು ತಿಳಿದು ಬಂದಿದೆ.
