ಸುದ್ದಿ ಕನ್ನಡ ವಾರ್ತೆ

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಉಭಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವನ್ನು ಇಂದು ಆಚರಿಸಲಾಯಿತು.

ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಗುರುಮೂರ್ತಿ ಅಧಿಷ್ಠಾನಕ್ಕೆ ಶತರುದ್ರ ಪೂರ್ವಕ ಮಹಾಪೂಜೆಯನ್ನು ನೆರವೇರಿಸಿದರು. ಆರಾಧನಾ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಉಭಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸಾಂಗವಾಗಿ , ವಿಧ್ಯುಕ್ತವಾಗಿ ನಡೆದವು.

ಮಧ್ಯಾಹ್ನ ಶ್ರೀ ನಾರಾಯಣ ದಾಸರು ಕೀರ್ತನೆಯನ್ನು ಮಾಡಿದರು. ಭಕ್ತರು ಭಕ್ತಿಯಿಂದ ಕೀರ್ತನೆಯಲ್ಲಿ ಪಾಲ್ಗೊಂಡರು. ಸಂಜೆ ಖರ್ವಾ ವಿಶ್ವೇಶ್ವರ ಭಟ್ ರವರ ಭಕ್ತಿ ಸಂಗೀತವು ಪ್ರೇಕ್ಷಕರನ್ನು ಭಕ್ತಿಯ ಸಾಗರದಲ್ಲಿ ತೇಲಿಸಿತು.