ಸುದ್ದಿ ಕನ್ನಡ ವಾರ್ತೆ

ರಾಮನಗರ:ತಾಲೂಕಿನ ರಾಮನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿ ರಾಮನಗರ ಇವರ ವತಿಯಿಂದ ಶನಿವಾರ ದಿನಾಂಕ 22ರಂದು ಅಯ್ಯಪ್ಪ ಸ್ವಾಮಿ ವ್ರತ ಆಚರಣೆ ಹಾಗೂ ಪಡಿಪೂಜೆ,ಭಕ್ತಿ ಪೂರ್ವಕ ಆರಂಭಿಸಲಾಯಿತು.

 

ಈ ವೃತಾಚರಣೆ ಮಕರ ಸಂಕ್ರಮಣದ ವರೆಗೆ ಶೃದ್ಧಾ ಭಕ್ತಿಯಿಂದ ನಡೆಯುತ್ತದೆ.ಶ್ರೀ ಅಯ್ಯಪ್ಪ ಸ್ವಾಮಿ ವ್ರತದಾಧಾರಿಗಳು ಹಾಗೂ ಗ್ರಾಮದ ಭಕ್ತರು ಉಪಸ್ಥಿತರಿದ್ದರು. ಜೊತೆಗೆ ಪೂಜೆಯನ್ನು ನೆರವೇರಿಸಲಾಯಿತು. ನಾವು ನಂಬಿದ ದೈವಶ್ರೀ ಅಯ್ಯಪ್ಪ ಸ್ವಾಮಿ ನಮ್ಮ ಊರು,ನಾಡು ಹಾಗೂ ದೇಶಕ್ಕೆ ಒಳಿತು ಮಾಡಲಿ ಎಂದು ಶ್ರೀ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡರು.