ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಮುಖ ಸಂಪರ್ಕ ಮಾಧ್ಯಮಗಳಲ್ಲಿ ಒಂದಾದ ಮೊಬೈಲ್ ಸಂಪರ್ಕದ ಕೆಲ ಹೊಸ ಟವರ್ ನಿರ್ಮಾಣಗೊಂಡು ನಿಂತರು,ಟವರ್ ಗಳ ಸಂಪರ್ಕ ಸೇವೆ ನೀಡಿಲ್ಲ ಕಾರಣ ಆಯಾ ಟವರ್ ಗೆ ಸಂಬಂಧಿಸಿದ ಗ್ರಾಹಕರು ಬಿಎಸ್ಎನ್ಎಲ್ ಇಲಾಖೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ದೈನಂದಿನ ವ್ಯವಹಾರ,ಕಚೇರಿ ಕೆಲಸ ಕಾರ್ಯಗಳು ಆನ್ ಲೈನ್ ಮುಖಾಂತರ ನಡೆಯುತ್ತಿದೆ.ಕೇಂದ್ರ ಸರ್ಕಾರದ ಬಿಎಸ್ಎನ್ಎಲ್ ಇಲಾಖೆಯ ವತಿಯಿಂದ ಹೊಸ ಟವರ್ ಮಂಜೂರಾಗಿದ್ದು, ನಿರ್ಮಾಣ ಗೊಂಡ ಕೆಲ ಹೊಸ ಟವರ್ ಗಳಲ್ಲಿ ನುಜ್ಜಿಯ ಬಿಎಸ್ಎನ್ಎಲ್ ಟವರ್ ಒಂದಾಗಿದ್ದು ಇದುವರೆಗೂ ಸಂಪರ್ಕ ಸೇವೆ ನೀಡಿಲ್ಲ.ಕೆಲವು ಇನ್ನೂ ಹಳೆಯ 2ಜಿ,3ಜಿ ಟವರ್ ಗಳನ್ನು 4ಜಿ ಗೆ ಅಪ್ ಗ್ರೇಡಿನ ಕೆಲಸ ಕೆಲವು ಕಡೆ ಆಗಿದ್ದು, ಇನ್ನೂ ಹಲವು ಕಡೆ ಆಗಿಲ್ಲ.
ಈ ಬಗ್ಗೆ ಗ್ರಾಹಕರು ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳಿಗೆ ತಿಳಿಸಿದರೂ, ಮಾಧ್ಯಮಗಳಲ್ಲಿ ವಾರಕ್ಕೊಂದು ಬಾರಿ ಬಿಎಸ್ಎನ್ಎಲ್ ಅವ್ಯವಸ್ಥೆಯ ವಿರುದ್ಧ ಸುದ್ದಿ ಬಂದರೂ ಇಲಾಖೆಯ ಕೆಲಸದಲ್ಲಿ ಪ್ರಗತಿ ಆಗದೇ ಇರುವುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಇಲಾಖೆಯವರು ಶೀಘ್ರ ಕಾರ್ಯತತ್ಪರರಾಗಿ ಸಂಪರ್ಕಕ್ಕೆ ಕಾದು ನಿಂತ ನುಜ್ಜಿ ಬಿಎಸ್ಎನ್ಎಲ್ ಟವರ್ ಸೇವೆ ಆರಂಭಿಸಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
