ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ (ಉತ್ತರಕನ್ನಡ). ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕುಂಬಾರವಾಡಾ ಇವರ ಸಂಯುಕ್ತಾಶ್ರಯದಲ್ಲಿ ಕುಂಬಾರವಾಡಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:21-11-2025 ರ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಾರವಾಡಾದಲ್ಲಿ ವಿಜ್ರಂಭಣೆಯಿಂದ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಂಬಾರವಾಡಾ ಕ್ಲಸ್ಟರಿನ ಸಿ.ಆರ್.ಪಿ ಗಳಾದ ಭಾಸ್ಕರ ಗಾಂವ್ಕರರವರು ಕುಂಬಾರವಾಡಾ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಗಣ್ಯರ ಸಹಕಾರವಿದೆ.ಯಾವುದೇ ಶೈಕ್ಷಣಿಕ ಕಾರ್ಯಕ್ರಮ ಕೇವಲ ಇಲಾಖೆಯಿಂದ ಮಾತ್ರ ಆಯೋಜಿಸಲು ಆಗದೇ,ಸಮುದಾಯದ ಸಹಭಾಗಿತ್ವ ಇದ್ದಲ್ಲಿ ಕಾರ್ಯಕ್ರಮದ ಯಶಸ್ಸನ್ನು ಸಾಧಿಸಬಹುದು,ಸ್ಪರ್ಧಾ ಕಾರ್ಯಕ್ರಮದ ಬಹುಮಾನಕ್ಕೆ ವಿಶೇಷ ಅನುದಾನ ಇಲ್ಲದಿರುವ ಕಾರಣ ದಾನಿಗಳಾದ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಮಂಗೇಶ ಕಾಮತ್ ಬಹುಮಾನದ ಪ್ರಾಯೋಜಕತ್ವ ನೀಡಿದ್ದರ ಬಗ್ಗೆ,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ,ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಸಿ.ಆರ್.ಪಿ ಗಳಾದ ಭಾಸ್ಕರ ಗಾಂವ್ಕರ ನಡೆಸಿ ಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಕುಂಬಾರವಾಡಾ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ರಂಜಿತ್ ದೇಸಾಯಿ,ಪ್ರಸನ್ನ ಗಾವಡಾ,ಹೇಮಾ ಮೇಡಂ,ನಿವೃತ್ತ ಶಿಕ್ಷಕರಾದ ಜನಾರ್ದನ ಹೆಗಡೆ, ಸುರೇಶ ಸಾವಂತ, ಗುಂದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ,ಉಳವಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಸಂತೋಷ ರಾಯಕರ,ಇನ್ನುಳಿದ ಶಿಕ್ಷಕರು,ಎಸ್.ಡಿ.ಎಂ.ಸಿ. ಸದಸ್ಯರು ಇದ್ದರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಠಪಾಠ,ಧಾರ್ಮಿಕ ಪಠಣ, ಅಭಿನಯ ಗೀತೆ, ಆಶು ಭಾಷಣ, ಮಿಮಿಕ್ರಿ,ಭಕ್ತಿ ಗೀತೆ, ಛದ್ಮವೇಷ, ದೇಶ ಭಕ್ತಿಗೀತೆ,ಕ್ಲೇ ಮಾಡೆಲಿಂಗ, ಕಥೆ ಹೇಳುವುದು, ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಕುಂಬಾರವಾಡಾ ಕ್ಲಸ್ಟರಿನ ಶಾಲೆಗಳಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ,ನೋಟ್ ಪುಸ್ತಕವನ್ನು ವೇದಿಕೆಯ ಮೇಲಿನ ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ನಿರ್ಣಾಯಕರಿಗೆ ಸಹಕರಿಸಿದ ಜೋಸಫ್ ಸರ್,ಗೋಕುಲ್ ಸ್ಥಳೇಕರ,ಪಕೀರಪ್ಪ ದರಿಗೊಂಡ, ಜನಾರ್ದನ ಹೆಗಡೆ, ಸುರೇಶ ಸಾವಂತ,ಈರಣ್ಣ ಪಗಡಿ,ಶ್ರೀಕಾಂತ ನಾಯ್ಕ,ಶಾಂತಕುಮಾರ ಎಸ್.ಕೆ, ಮಂಜುನಾಥ ಮೋರೆ,ಸವಿತಾ ವೇಳಿಪ, ಮಿಥಾಲಿ ಕುಮಗಾಳಕರ, ವಿನೋದ ನಾಯ್ಕ, ಕಮಲಾಕರ, ಶಾಂಭವಿ,ಚಂದ್ರಕಾಂತ ನಾಯ್ಕ ಸೇರಿದಂತೆ ಇನ್ನಿತರ ಶಿಕ್ಷಕರುಗಳಿಗೆ ಅಭಿನಂದನಾ ಪತ್ರಗಳನ್ನು ಗಣ್ಯರು ವಿತರಿಸಿದರು. ಶಾಲಾ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು,ಪಾಲಕರು, ಪೋಷಕರು,ಅಡುಗೆಯವರು ತಯಾರಿಸಿದ ಶುಚಿ,ರುಚಿಯಾದ ಊಟದ ವ್ಯವಸ್ಥೆ,ಅತಿಥಿ ಸತ್ಕಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಹೃದಯ ಪೂರ್ವಕವಾಗಿ ವಂದಿಸಲಾಯಿತು.
