ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಉಳವಿಯಿಂದ ಕುಂಬಾರವಾಡಾ,ಜೋಯಿಡಾ ಮಾರ್ಗವಾಗಿ ಹೋಗುವ ಇಚಲಕರಂಜಿ ಬಸ್ಸಿನಲ್ಲಿ ಆಸನಗಿಂತ ಹೆಚ್ಚಿನ ಪ್ರಯಾಣಿಕರು,ಅದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುವ ದೃಶ್ಯ ಪತ್ರಕರ್ತರೊರ್ವರ ಕ್ಯಾಮೆರಾದಲ್ಲಿ ಸೆರೆಯಾಯಿತು.

ತಾಲೂಕಿನ ಗ್ರಾಮೀಣ ಭಾಗದ ಜನರಿಗೆ,ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಇದ್ದ ಸಾರಿಗೆ ವ್ಯವಸ್ಥೆಯನ್ನು ನಂಬಿಕೊಂಡು ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಕೆಲಸ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಸರ್ಕಾರವು ಮಹಿಳೆಯರಿಗಾಗಿ ಉಚಿತ ಪ್ರಯಾಣದ ದೃಷ್ಟಿಯಿಂದ ಗ್ಯಾರಂಟಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ.ಯೋಜನೆಯು ಉತ್ತಮವಾದರು ಅದಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯನ್ನು ಮಾಡಿ,ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ನೀಡಬೇಕಾದ ಅಗತ್ಯವಿದೆ.ಇಲ್ಲವಾದಲ್ಲಿ ಏನಾದರೂ ಅಪಾಯ ಉಂಟಾದರೆ ಇದಕ್ಕೆ ಹೊಣೆ ಯಾರು?ಎಂಬುದು ಪ್ರಯಾಣಿಕರ ಪ್ರಶ್ನೆ. ತಾಲೂಕಾಡಳಿತ ತಾಲೂಕಿನ ಕೇಂದ್ರ ಸ್ಥಳದಲ್ಲಿ ಬಸ್ ಡೀಪೋ,ಸಮಯಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆಯ ಅನುಕೂಲ, ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ತಕ್ಕಂತೆ ಬಸ್ಸಿನ ಸೌಕರ್ಯವನ್ನು ನೀಡಬೇಕೆನ್ನುವುದು ತಾಲೂಕಿನ ಸಾರ್ವಜನಿಕರ ಮನವಿಯಾಗಿದೆ.