ಸುದ್ದಿ ಕನ್ನಡ ವಾರ್ತೆ

. ರಾಮನಗರ:ತಾಲೂಕಿನ ರಾಮನಗರದಲ್ಲಿನ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ನಡೆದ 6 ಶಾಲೆಗಳ ಕಾರ್ಮೆಲೈಟ್ 2025ರ ಕ್ರೀಡಾಕೂಟದಲ್ಲಿ ಇಲ್ಲಿನ ಮೌಂಟ್ ಕಾರ್ಮೆಲ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಈ ಕ್ರೀಡಾಕೂಟದಲ್ಲಿ ಮೌಂಟ್ ಕಾರ್ಮೆಲ್ ಶಾಲೆ ರಾಮನಗರ, ಹೂವಿನ ಹಡಗಲಿ, ಕಡಗಂಚಿ, ಬೇಲೂರು, ಶಿವಮೊಗ್ಗ ಮತ್ತು ಮೀರಾ ರೋಡ್ ಮುಂಬೈ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.ಕ್ರೀಡಾಕೂಟದಲ್ಲಿ ವೈಯುಕ್ತಿಕ,ಗುಂಪು ಆಟಗಳನ್ನು ಆಡಿಸಲಾಯಿತು. ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾ ಪ್ರಾಂತ್ಯದ ಫಾದರ್ ಡಾ.ಪಿಯುಸ್ ಡಿಸೋಜಾ,ಕರ್ನಾಟಕ- ಗೋವಾ ಪ್ರೋವಿಷಲ್ ಫಾದರ್ ಸಿಲ್ವಸ್ತೆ ಡಿಸೋಜಾ,ರಾಮನಗರ ಮೌಂಟ್ ಕಾರ್ಮೆಲ್ ಶಾಲೆಯ ಮ್ಯಾನೇಜರ್ ಜೋಕಿಂ ರೋಡ್ರಿಗ್ಸ್,ಪ್ರಾಚಾರ್ಯ ಅಂಥೋನಿ ಸೋಜ, ಜೋಯಿಡಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ,ರಾಮನಗರ ಕ್ಲಸ್ಟರಿನ ಸಿ.ಆರ್ .ಪಿ ಗಳು,ಹನುಮಾನಲೇನ ಶಾಲೆಯ ಮುಖ್ಯ ಶಿಕ್ಷಕರಾದ ಬಿ ಹೆಚ್ ಬಾಗವನ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಮನಗರ ಮೌಂಟ್ ಕಾರ್ಮೆಲ್ ಶಾಲೆಯ ಮಕ್ಕಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದಿಸಲಾಯಿತು. ಫಾದರ್ ಸಿಲ್ಟನ್ ಕಾರ್ಯಕ್ರಮ ನಿರೂಪಿಸಿದರು.