ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ), ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಅಂಬೋಳಿ ಇವರ ಸಹಯೋಗದೊಂದಿಗೆ ನಂದಿಗದ್ದೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:15-11-2025 ರ ಶನಿವಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೋಳಿಯಲ್ಲಿ ನಡೆಯಿತು.
ವೇದಿಕೆಯ ಮೇಲಿನ ಗಣ್ಯರನ್ನು ಅಂಬೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನುಪಮಾ ಖಾರ್ವಿಯವರು ವಿದ್ಯಾರ್ಥಿಗಳಿಂದ ಹೂವನ್ನು ನೀಡುವ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ,ಸ್ವಾಗತ ಗೀತೆಯನ್ನು ಅಂಬೋಳಿ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಅಂಬೋಳಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸದಾ ಹಸನ್ಮುಖಿ,ಕಷ್ಟ ಸುಖದಲ್ಲಿ ಸ್ಪಂದಿಸುವ ಸಹನಾ ಜೀವಿ,ಕ್ರೀಯಾಶೀಲ ನಂದಿಗದ್ದೆ ಕ್ಲಸ್ಟರಿನ ಸಿ.ಆರ್.ಪಿ ಭಾಸ್ಕರ ಗಾಂವ್ಕರ ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರತಿವರ್ಷದ ನಿಯಾಮವಳಿಯಂತೆ ನಂದಿಗದ್ದೆ ಕ್ಲಸ್ಟರಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕೇವಲ ಇಲಾಖೆಯಿಂದ ಅಷ್ಟೇ ಶೈಕ್ಷಣಿಕ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ,ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಸಹಕಾರ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಬಿ.ಆರ್.ಪಿ ಶಶಿಕಾಂತ ಹೂಲಿ,ಯರಮುಖ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.ವೇದಿಕೆಯಲ್ಲಿ ಉಳವಿ ಗ್ರಾಮ ಪಂಚಾಯತ ಸದಸ್ಯರಾದ ವಿಷ್ಣು ಬಿರಂಗತ, ಊರಿನ ಹಿರಿಯರಾದ ದೇಸಾಯಿ ಬಂಧುಗಳು,ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ,ಉಪಾಧ್ಯಕ್ಷ,ನಂದಿಗದ್ದೆ ಕ್ಲಸ್ಟರಿನ ವಿವಿಧ ಶಾಲೆಗಳ ಅಧ್ಯಕ್ಷರುಗಳಾದ ವಾಸು ಬಿರಂಗತ,ರಾಮಕೃಷ್ಣ ಗೌಡ, ಮಂಜುನಾಥ ಭಾಗವತ, ಸೋಮಣ್ಣ ವೇಳಿಪ,ಅಶೋಕ ಗಾಂವಕರ,ಇನ್ನುಳಿದ ಶಾಲೆಗಳ ಅಧ್ಯಕ್ಷರು,ಅರಣ್ಯ ಇಲಾಖೆಯ ಅಧಿಕಾರಿಗಳು,ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಹ ಶಿಕ್ಷಕಿಯಾದ ರಾಜಶ್ರೀ ನಾಯಕ ವಂದನಾರ್ಪಣೆ ಸಲ್ಲಿಸಿದರು.
