ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಪ್ರೇರಣಾ ಸಂಸ್ಥೆ ಯನ್ನ ಕಟ್ಟಿ ಬೆಳೆಸಿದ್ದ ಸುಕನ್ಯಾ ದೇಸಾಯಿ ಅವರಿಗೆ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನಿನ್ನೆ ಬೆಂಗಳೂರಿನ ಜ್ಞಾನ ಭಾರತಿಯ ಕಲಾ ಗ್ರಾಮ ದಲ್ಲಿ ಆದಿ ಚುಂಚನಗಿರಿ ಯ ಶ್ರೀಶ್ರೀ ಸೌಮ್ಯನಾಥ್ ಸ್ವಾಮೀಜಿ,ಮಾಜಿಮುಖ್ಯಮಂತ್ರಿ ಸದಾನಂದ ಗೌಡ, ನಾಡೋಜ ಮನು ಬಳಿಗಾರ ಮಾಜಿಶಾಸಕ ನೆ ಲ ನರೇಂದ್ರ ಬಾಬು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸುಕನ್ಯಾ ದೇಸಾಯಿ ಅವರ ಸಾಹಿತ್ಯ, ಸಮಾಜ ಮತ್ತು ಸಾಂಸ್ಕೃತಿಕ ಸೇವೆ ಸಾಧನೆ ಗಳನ್ನು ನೋಡಿ ಕರುನಾಡ ರತ್ನ ಪ್ರಶಸ್ತಿ ನೀಡಲಾಗಿದೆ ಪ್ರೇರಣಾ ಸಂಸ್ಥೆಯ ಮೂಲಕ ಜಿಲ್ಲೆಯ, ರಾಜ್ಯದ ಅನೇಕ ಕಲಾವಿದರು ಸಾಹಿತಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶನ ಕ್ಕೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕವೂ ಅನೇಕ ಕಲಾವಿದರನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೂ ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯಕ್ಷೇತ್ರದಲ್ಲೂ ಇವರು ಸಾಕಷ್ಟು ಸಾಧನೆ ಮಾಡಿದ್ದಲ್ಲದೆ ತಾಳಮದ್ದಳೆ ಅರ್ಥಗಾರಿಕೆ, ಭಜನೆಯ ಮೂಲಕವೂ ಹೆಸರು ಮಾಡಿದ್ದಾರೆ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ ನ ತಾಲೂಕಾ ಸಮ್ಮೇಳನಾಧ್ಯಕ್ಷರಾಗಿಯೂ ಗೌರವ ಪಡೆದಿದ್ದು ಇದುವರೆಗೂ ಅನೇಕ ಪ್ರಶಸ್ತಿಗಳಿಗೆ ಭಾಜನ ರಾಗಿದ್ದಾರೆ ಅನೇಕ ಉತ್ಸವ ವೇದಿಕೆಗಳಲ್ಲಿ ಸನ್ಮಾನಿಸಲ್ಪಟ್ಟಿರುತ್ತಾರೆ,ಇವರ ಸಾಹಿತ್ಯ, ಸಮಾಜಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರನ್ನು ಗುರುತಿಸಿ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ