ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿ ಫೆಬ್ರುವರಿ 23ರಂದು ಭಾನುವಾರ ಗುಳ್ಳಾಪುರ ಉತ್ಸವ ಹಾಗೂ ಆಲೆಮನೆ ಹಬ್ಬ ಅದ್ದೂರಿಯಾಗಿ ಜರುಗಿತು.
ದಿನಮಿಡಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಗೆದ್ದವು.
ಸಂಜೆ ಆಯೋಜಿಸಿದ್ದ ಆಲೆಮನೆ ಹಬ್ಬದಲ್ಲಿ ಸಂಗೀತ ಸಂಜೆ ಪ್ರೇಕ್ಷಕರನ್ನು ರಂಜಿಸಿತು. ಆಲೆಮನೆ ಹಬ್ಬದಲ್ಲಿ ಕಬ್ಬಿನ ಹಾಲು ಸವಿದು ಜನರು ಖುಷಿಪಟ್ಟರು. ಬಿಸಿ ಬೆಲ್ಲ , ತೊಡೆದೇವು, ಸೇರಿದಂತೆ ಕಬ್ಬಿಣ ಹಾಲಿನ ವಿವಿಧ ಉತ್ಪನ್ನಗಳನ್ನು ಖರೀದಿಸಲು ಜನ ಮುಗಿಬಿದ್ದ ದೃಶ್ಯ ಕಂಡು ಬಂತು.
ಈ ಸುಂದರ ಉತ್ಸವದಲ್ಲಿ ತೆಂಗಿನ ಗರಿ ಗಳಿಂದ ನಿರ್ಮಿತವಾದ ಪ್ರವೇಶ ದ್ವಾರ ಅತ್ಯಾಕರ್ಷಣೀಯವಾಗಿ ಕಂಡು ಬಂತು. ಒಟ್ಟಾರೆ ಗುಳ್ಳಾಪುರ ಉತ್ಸವ ಹಾಗೂ ಆಲೆಮನೆ ಹಬ್ಬ ಜನ ಮೆಚ್ಚುಗೆಗೆ ಪಾತ್ರವಾಯಿತು.