ಸುದ್ದಿ ಕನ್ನಡ ವಾರ್ತೆ
ಶಿರಸಿ: ಜನಪ್ರತಿನಿಧಿಗಳು ಹವಾಮಾನ ಆಧರಿತ ಬೆಳೆ ವಿಮೆ ಕುರಿತು ಗೊಂದಲ ಸೃಷ್ಟಿಸಬಾರದು. ರಾಜ್ಯ, ಕೇಂದ್ರಗಳ ಹೆಸರಿನಲ್ಲಿ ರಾಜಕೀಯ ಆಸಕ್ತಿ ಮಾಡಬಾರದು. ಇದರಿಂದ ವಿಮಾ ಕಂಪನಿ ಓಡಿಹೋಗಲು ಬಿಡಬಾರದು ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ವಿಮಾ ಕಂಪನಿ ಡೊಂಬರಾಟಕ್ಕೆ ಕೇಂದ್ರ ಸರಕಾರ ಬ್ರೇಕ್ ಹಾಕಬೇಕು. ವಿಮಾ ಕಂಪನಿ ಕಂಟ್ರೋಲ್ ಮಾಡಬೇಕಾದ್ದು ಕೇಂದ್ರ ಸರಕಾರ. ಕಪ್ಪುಪಟ್ಟಿಗೆ ಸೇರಿಸುವ ಅಧಿಕಾರವೂ ಕೇಂದ್ರಕ್ಕಿದೆ ಎಂದರು. ಅನಗತ್ಯವಾಗಿ ಸಂಘರ್ಷ ಬೇಡ. ಒಟ್ಟಾಗಿ ಈ ಜಿಲ್ಲೆಯ ಬೆಳೆಗಾರರಿಗೆ ನ್ಯಾಯ ಕೊಡಬೇಕು ಎಂದ ಅವರು,
ಜನರ ಹಿತದಿಂದ ಆರೋಪ, ಪ್ರತ್ಯಾರೋಪದಿಂದ ರೈತರಿಗೆ ವಿಮೆ ಸಿಗದು ಎಂದರು.
ಕೆಡಿಸಿಸಿ ಬ್ಯಾಂಕ್ ರೈತರ ಪರವಾಗಿ ಒಂದು ಕಡೆ ಹೋರಾಟ, ಇನ್ನೊಂದು ಕಡೆ ನ್ಯಾಯಾಲಯದ ಹೋರಾಟ ಮಾಡಲು ಮಾಡಲು ಮುಂದಾಗಲಿದೆ. ಕೆಡಿಸಿಸಿ ಬ್ಯಾಂಕ್ ಲೀಡ್ ತಗೊಂಡು ಹೈಕೋರ್ಟ ಹೋಗಲು ಸಿದ್ದ. ನಮಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆನ್ನೆಲಬಾಗಿ ನಿಲ್ಲಬೇಕು. ಪಕ್ಷ ಪಂಗಡ ಬಿಟ್ಟು ಕೆಲಸ ಮಾಡಬೇಕು ಎಂದರು.
ವಿಮಾ ಕಂಪನಿ ಅನಗತ್ಯವಾಗಿ ಉತ್ತರ ಕನ್ನಡದ ಮೇಲೆ ಸವಾರಿ ಆರಂಭಿಸಿದೆ. ರಾಜ್ಯ ಸರಕಾರ ಐದು ಸಲ ಸಭೆ ಆಗಿದೆ. ಎರಡು ಸಭೆಯಲ್ಲಿ ನಾನೂ ಇದ್ದೆ. ಈ ಸಮಸ್ಯೆ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಗಮನಕ್ಕೂ ಇದೆ. ಜಿಲ್ಲೆಯಲ್ಲಿ ಇವತ್ತು ಕೇವಲ ೪೬ ಕಡೆ ಬೆಳೆ ವಿಮೆ ಬಂದಿದೆ. ವಿಚಿತ್ರ ಎಂದರೆ ಎಲ್ಲಿ ತೋಟಗಾರರ ಬೆಳೆ ಇಲ್ಲ ಅಲ್ಲಿಗೆ ಕೊಟ್ಟಿದ್ದಾರೆ ಎಂದೂ ಅಸಮಧಾನಿಸಿದರು.