ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ದಿನಾಂಕ 22/09/2025 ರಂದು ನಮ್ಮ ಸಂಜೀವನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿ ಮಂಗಳವಾರ ಉಳವಿ ಮಾರ್ಗದ ಹೆಣಕೋಳ ಹಾಗೂ ಮಳೆ ಗ್ರಾಮದ ಜನರು ಹಾಗೂ ಪ್ರತಿ ಗುರುವಾರ ಪಣಸೋಲಿ ಮಾರ್ಗದ ಮನಾಯಿ ಗ್ರಾಮದ ಜನರು ನಮ್ಮ ಸಂಜೀವಿನಿ ಸೇವಾ ಸಂಚಾರಿ ವಾಹಿನಿಯ ಸೇವೆಯನ್ನು ತಮ್ಮ ಊರಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಆದ ಕಾರಣ ದಿನಾಂಕ 03/10/2025 ರಂದು ನಮ್ಮ ಸಂಜೀವಿನಿ ಸೇವಾ ಟ್ರಸ್ಟಿನ ಸದಸ್ಯರು ಹಾಗೂ ಎಲ್ಲಾ ಪದಾಧಿಕಾರಿಗಳು ಸೇರಿ ಸಭೆ ನಡೆಸಿ ಈ ತಿಂಗಳ ಮೊದಲನೆ ವಾರದೊಂದು ಸೇವೆಯನ್ನು ಸಲ್ಲಿಸಲು ನಮಗೆ ಸೂಚಿಸಿದ್ದರು.
ಆದಕಾರಣ ಇಂದಿನ ದಿನಾಂಕ:- 06/11/2025 ಗುರುವಾರ ಪಣಸೋಲಿ ಮಾರ್ಗದಲ್ಲಿ ಬರುವ ಮನಾಯಿ ಗ್ರಾಮಕ್ಕೆ ತೆರಳಿ ಸೇವೆ ಸಲ್ಲಿಸಿದವು ಇಲ್ಲಿನ ಜನರು ನಮ್ಮ ಸಂಚಾರಿ ವಾಹಿನಿಗೆ ಅದ್ದೂರಿ ಸ್ವಾಗತ ಕೋರಿ ನಮ್ಮ ಸಂಜೀವಿನಿ ಸೇವಾ ಟ್ರಸ್ಟಿನ ಸಂಸ್ಥಾಪಕರಾದ ಶ್ರೀ ರವೀಂದ್ರ ರೇಡ್ಕರ್ ಹಾಗೂ ಅಧ್ಯಕ್ಷರಾದ ಶ್ರೀ ಸುನೀಲ್ ದೇಸಾಯಿ ಹಾಗೂ ಸೆಕ್ರೆಟರಿ ಡಾ.ಜಯಾನಂದ ಡೇರೆಕರ್ ಹಾಗೂ ಎಲ್ಲ ನಮ್ಮ ಟ್ರಸ್ಟಿನ ಪದಾಧಿಕಾರಿಗಳಿಗೆ ಜನರು ಧನ್ಯವಾದಗಗಳನ್ನು ತಿಳಿಸಿದರು.
