ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರ ಗ್ರಾಮದೇವಿಯರಿಗೆ ಶುಕ್ರವಾರ ಸ್ವರ್ಣ ಕಿರೀಟ ಸಮರ್ಪಣೆಯಾಗಿದೆ.
ಅಪಾರ ಭಕ್ತರ ಸಮ್ಮುಖದಲ್ಲಿ ದೇವಾಲಯ ಆಡಳಿತ ಮಂಡಳಿ ದೇವಿಯರಿಗೆ ಈ ಸ್ವರ್ಣ ಕಿರೀಟ ಸಮರ್ಪಿಸಿದ್ದಾರೆ.
ಪ್ರತಿ ವರ್ಷ ಆಯೋಜಿಸುವ ವಾರ್ಷಿಕ ಕಾರ್ಯಕ್ರಮಕ್ಕೆ ಸಹ ಈ ದಿನ ಚಾಲನೆ ನೀಡಲಾಯಿತು. ಹತ್ತಾರು ವೈದಿಕರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಸಹ ನಡೆದಿದ್ದು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು.