ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ತಾಲೂಕಿನ ರೈತರು ತಮ್ಮ ಬೆಳೆ ರಕ್ಷಣೆಗೆ ಹೆಣಗಾಡಿ ಬೆಳೆ ಉಳಿಸಿ ಕೊಳ್ಳ ಬೇಕಾದ ಪರಿಸ್ಥಿತಿ ಬಂದಿದೆ. ತಾಲೂಕು ಶೇಕಡಾ ಎಂಬತ್ತರಷ್ಟು ಅರಣ್ಯ ಪ್ರದೇಶ ದಿಂದ ತುಂಬಿದೆ ಅರಣ್ಯದ ಮದ್ಯದಲ್ಲಿ ಅಲ್ಲಿ ಇಲ್ಲಿ ಒಂದೋ ಎರಡೋ ಮನೆಗಳಿವೆ. ಕೆಲವು ಕಡೆ ಹತ್ತಾರು ಮನೆಗಳಿವೆ ಎಂದರೆ ಅದು ಒಂದು ಕೇಂದ್ರ ಸ್ಥಳ ಎಂದು ತಿಳಿಯಬಹುದು.

ಅದೇನೇ ಇರಲಿ ತಾಲೂಕಿನ ಪ್ರಮುಖ ಬೆಳೆ ಬತ್ತ ಅಡಿಕೆ, ತೆಂಗು ಬಾಳೆ ಕಾಳು ಮೆಣಸು ಆಗಿದೆ ಬೆಳೆಗಳಿಗೆ ಕಾಡುಪ್ರಾಣಿಗಳ ಕಾಟ ವಿಪರೀತ ವಾಗಿದೆ
ಬತ್ತ ನಾಟಿ ಮಾಡಿದಾಗಿನಿಂದ ಪ್ರಾಣಿ ಗಳ ಕಾಟ,ಜಿಂಕೆ ಗಳು ಮೇಯಲು ಬರುತ್ತವೆ ಮೊಲಗಳು ತೆನೆ ಕಟ್ಟುವಾಗ ತಿನ್ನುತ್ತವೆ ಹಂದಿ ಗಳು, ಪಕ್ಷಿ ಗಳು ತೆನೆ ಬಲಿಯಲು ಬಿಡದೇ ಪ್ರತಿ ದಿನ ದಾಳಿ ಮಾಡುತ್ತವೆ ಹಗಲಿನಲ್ಲಿ ಮನೆ ಜನ ಪಾಳಿಯಂತೆ ಕಾಯುತ್ತಾರೆ, ರಾತ್ರಿ ಹೊತ್ತು ಅಲ್ಲಲ್ಲಿ ಕಾವಲಿಗೆ ಮಾಳ ಎಂಬ ಎತ್ತರದಲ್ಲಿ ಚಿಕ್ಕ ಮನೆ ನಿರ್ಮಿಸಿ ಬೆಂಕಿ ಹಾಕಿ ಕುಳಿತು ಕಾಯುತ್ತಾರೆ ಅಲ್ಲಲ್ಲಿ ಪಟ್ಟಿಗೆ ಜೋಲಿಸಿ ಇಟ್ಟು ಅದರಲ್ಲಿ ಬ್ಯಾಟರಿ ಹಚ್ಚಿ ಇಡುತ್ತಾರೆ, ಇನ್ನು ಬೇರೆ ಮತ್ತೊಂದು ಕಡೆ ತಾನಾಗಿಯೇ ಡಣ್ಡ ಡಣ್ಣ ಎಂದು ಹೊಡೆದು ಕೊಳ್ಳುವಂತೆ ಮಾಡುತ್ತಾರೆ ಇದರಿಂದ ಕಾಡು ಪ್ರಾಣಿಗಳು ಬೆಳೆ ಹಾಳು ಮಾಡಲು ಬಾರದೇ ಇರಲಿ ಎಂದಾಗಿದೆ.

ತಾಲೂಕಿನ ಅತ್ಯಂತ ಹಿಂದುಳಿದ ಬಜಾರ
ಕುಣoಗ ಗ್ರಾಮ ಪಂಚಾಯತದ ಕಿಂದಳೆ ಗ್ರಾಮದಲ್ಲಿ ರೈತರು ಬೆಳೆ ರಕ್ಷಣೆಗೆ ಮಾಡಿಕೊಂಡ ಉಪಾಯ ಕಿಂದಳೇ ಗ್ರಾಮದ ಪ್ರಸಾದ ಗಾವುಡ ಬಡ ರೈತನ ಮಗನಾಗಿ ಶಿಕ್ಸಣ ಕಲಿಯುತ್ತ ರಜೆಯಲ್ಲಿ ಹೊಲ ಕಾಯುತ್ತ ಬೆಳೆ ರಕ್ಷಣೆಗೆ ಊರಿನ ರೈತರಿಗೆ ಪ್ರೋತ್ಸಾಹ ನೀಡುತ್ತ ರೈತರಿಗೆ ಬೆಳೆ ಬೆಳೆಸಲು ಪ್ರೋತ್ಸಾಹ ನೀಡುತ್ತಿದ್ದಾನೆ. ಇದು ಇಲ್ಲಿನ ಜನರಿಗೆ ತುಂಬಾ ಪ್ರೋತ್ಸಾಹ ದಾಯಕ ವಾಗಿದೆ.