ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನಲ್ಲಿ ಬಸ್ ಡಿಪೋ ಇಲ್ಲದೇ ಇರುವ ಕಾರಣ ಜೋಯಿಡಾ ತಾಲೂಕಿನ ಜನತೆ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ .

ಇದಕ್ಕೆಲ್ಲ ಕಾರಣ ದಾಂಡೇಲಿಯ ಡಿಪೋ ಮೆನೇಜರ್ ಅವರ ಅಲಕ್ಸವೇ ಕಾರಣ ಎಂದು ತಾಲೂಕಿನ ಜನರು ಆಪಾದಿಸಿದ್ದು ಕೂಡಲೇ ಕೆಲಸ ಮಾಡುವ ಡಿಪೋ ಮೆನೇಜರ್ ನನ್ನು ಕೊಡಿ ಇಲ್ಲವೇ ಜೋಯಿಡಾ ಕ್ಕೆ ಬಸ್ ಡಿಪೋ ಕೊಡಿ ಎಂದು ಸಾರ್ವಜನಿಕ ರು ಆಗ್ರಹಿಸಿದ್ದಾರೆ ತಾಲೂಕಿನ. ವಿದ್ಯಾರ್ಥಿಗಳು ಕ್ಯಾಸಲ್ ರಾಕ್ ಜನರು ಗುಂದ ಜನರು ಡಿಗ್ಗಿ ಜನರು ಹೀಗೆ ಪ್ರತಿ ಯೊಂದು ಪಂಚಾಯತ್ ದವರೂ ತಮ್ಮ ಗ್ರಾಮ ಗಳಿಗೆ ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸಂಪರ್ಕ ಮಾಡಿಕೊಡಿ ಎಂದು ಹಲವಾರು ವರ್ಷ ಗಳಿಂದ ಕೇಳುತ್ತಾಲೇ ಇದ್ದಾರೆ ಈ ಹಿಂದೆ ಇದ್ದ ದಾಂಡೇಲಿ ಡಿಪೋ ವ್ಯವಸ್ಥಾಪಕರುಗಳು ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಸೇವೆ ನೀಡುತ್ತಿದ್ದರು.

ಆದರೆ ಈಗ ಕಳೆದ 3ವರ್ಷ ಗಳಿಂದ ಇರುವವ ರು ಜೋಯಿಡಾ ತಮಗೆ ಸಂಬಂದಿಸಿದ್ದಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ ನಡುರಾತ್ರಿ ರಸ್ತೆ ಯಲ್ಲಿ ವಿದ್ಯಾರ್ಥಿ ಗಳು ಬಸ್ ಬಾರದೇ ಪರದಾಡುವದು ತಾಲೂಕಿನಲ್ಲಿ ಹಲವಾರು ಬಾರಿ ನಡೆದಿದೆ ವಿದ್ಯಾರ್ಥಿಗಳಿಗೆ ಬಿಡುವ ಬಸ್ ವೇಳೆಗೆ ಸರಿಯಾಗಿ ಬಿಡುವದು ಪ್ರತಿ ದಿನ ಎಲ್ಲ ರೂಟ್ ಗಳ ಬಸ್ ಹೋಗಿದೆಯೇ ಎಂದು ಗಮನಿಸಬೇಕಾದವರು ಅವರೆ ನಿಸ್ಕಾಳಜಿ ಮಾಡಿದರೆ ಹೇಗೆ, ತಾಲೂಕಾ ಕೇಂದ್ರ ದಲ್ಲಿ ಬಸ್ ಪಾಸ್ ಕೌಂಟರ್ ಆರಂಭಿಸಿ ಎಂದು ವರ್ಷದ ಹಿಂದೆ ಕೆ ಡಿ ಪಿ ಸಭೆಯಲ್ಲಿ ಶಾಸಕ ಆರ್. ವಿ. ದೇಶಪಾಂಡೆ ಯವರು ಹೇಳಿದ್ದರು .

ಆದರೆ ಇದುವರೆಗೂ ವಿದ್ಯಾರ್ಥಿಗಳಿಗೆ ಆಗಲಿ ವಯಸ್ಸು ಆದವರಿಗೆ ಆಗಲಿ ಬಸ್ ಪಾಸ್ ನ ಕೌಂಟರ್ ಜೋಯಿಡಾ ದಲ್ಲಿ ಪ್ರಾರಂಬಿಸಿಲ್ಲ ವೇಳೆಗೆ ಸರಿಯಾಗಿ ಬಸ್ ಬರುವುದಿಲ್ಲ ಹಲವು ಬಸ್ ಗಳು ಬಾರದೇ ಇರುವುದರಿಂದ ಮಹಿಳೆ ಯರು ಸರಕಾರದ ಭಾಗ್ಯ ದಿಂದ ವಂಚಿತ ರಾಗುತ್ತಿದ್ದಾರೆ.

ಜೋಯಿಡಾ ದಲ್ಲಿ ಬಸ್ ಡಿಪೋ ಇದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಜನ ದೂರಿದ್ದಾರೆ ಧಾರವಾಡ ಕ್ಕೆ ಐದು ನಿಮಿಷ ಕ್ಕೆ ಒಂದು ಬಸ್ ಬಿಡುವವರು ರಾಜ್ಯದ ಅತಿ ದೊಡ್ಡ ತಾಲೂಕು ಜೋಯಿಡಾ ಕ್ಕೆ ಬೆರಳೆಣಿಕೆ ಯಷ್ಟು ಬಸ್ ಗಳಿಂದ ಸೇವೆ ನೀಡಿದಂತೆ ಮಾಡುವದು ಮುಗ್ದ ಜನತೆಗೆ ಮಾಡುವ ಅನ್ಯಾಯ ಎಂದು ಸಾರ್ವಜನಿಕರು ಈ ಮೂಲಕ ಆಪಾಧಿಸಿದ್ದಾರೆ. ನಂದಿಗದ್ದೆ ಗ್ರಾಮ ಪಂಚಾಯತ ದ ಎಂಟು ಗ್ರಾಮಗಳು ಮತ್ತು ಉಳವಿಗ್ರಾಮ.ಪಂಚಾಯತ ದ ಕೆಲವು ಗ್ರಾಮ ಗಳಜನರು ಕಳೆದ ಜೂನ್ ತಿಂಗಳಿನಿಂದ ಬಸ್ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದುದಾಂಡೇಲಿ ವ್ಯಾಪ್ತಿಯಲ್ಲಿ. ಬಂದರೂ ಜನತೆಗೆ ಸರಿಯಾಗಿ ಬಸ್ ಕಲ್ಪಿಸುವ ಕೆಲಸ ವನ್ನು ಮಾಡಿಲ್ಲ ಹಾಗಾಗಿ ಜೋಯಿಡಾ ಕ್ಕೆ ಬಸ್ ಡಿಪೋ ಬೇಕೆಂದು ತಾಲೂಕಾ ಆಡಳಿತ ಕೂಡಲೇ ಸರಕಾರಕ್ಜೆ ಬೇಡಿಕೆ ಸಲ್ಲಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.