ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ
ಕರ್ನಾಟಕ ಪ್ರಾಂತ ರೈತ ಸಂಘದ ಮೂರು ವರ್ಷಕ್ಕೊಮ್ಮೆ ನಡೆಯುವ 6 ನೇಯ ಜೋಯಿಡಾ ತಾಲೂಕು ಸಮ್ಮೇಳನ ದಿನಾಂಕ:31 ಅಕ್ಟೋಬರ್ 2025 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಖಾನಗಾಂವದಲ್ಲಿ ನಡೆಯಲಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಶ್ಯಾಮನಾಥ ನಾಯಕ ಸಮ್ಮೇಳನ ಉದ್ಘಾಟಿಸಿ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಪ್ರಮುಖವಾಗಿ ಜೋಯಿಡಾ ತಾಲೂಕಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಒತ್ತಾಯಿಸಿ ನಡೆಯಲಿದೆ.

ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ವರ್ಷವಿಡಿ ಸರ್ವ ಋತು ರಸ್ತೆಯ ಇಲ್ಲದೇ ಸಮಸ್ಯೆ, ಸೇತುವೆ ಗಳ ನಿರ್ಮಾಣ,ವಿದ್ಯುತ್ ಸಮಸ್ಯೆ, ಅರಣ್ಯ ಅತಿಕ್ರಮಣ, ಕುಂಬ್ರಿ ಭೂಮಿ ಸಮಸ್ಯೆ, ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು,ದೂರ ಸಂಪರ್ಕ ನೆಟ್ವರ್ಕ್ ಟವರ್ ಸಮಸ್ಯೆ,ಹುಲಿ ಯೋಜನೆಯಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆ, ಶಾಲಾ ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಸಾರಿಗೆ ಸಂಪರ್ಕ ಸಮಸ್ಯೆ ಇತ್ಯಾದಿ ಇನ್ನಿತರ ಹಲವಾರು ವಿಷಯಗಳ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಿ ನಿರ್ಣಯ ಕೈಗೊಳ್ಳಲಾಗುವುದು.

ಎಲ್ಲಾ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು
ಪ್ರೇಮಾನಂದ ವೇಳಿಪ
ತಾಲೂಕ ಅಧ್ಯಕ್ಷರು
ಕರ್ನಾಟಕ ಪ್ರಾಂತ ರೈತ ಸಂಘ ಜೋಯಿಡಾ ವಿನಂತಿಸಿಕೊಂಡಿದ್ದಾರೆ.