ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಅಲ್ಲದೇ ಕೋಟ್ಯಾಂತರ ಕನ್ನಡಿಗರ ಜೊತೆ,ದೇಶದ ಉದ್ದಗಲಕ್ಕೂ ಅಭಿಮಾನ  ಬಳಗವನ್ನು ಹೊಂದಿದ ಕರ್ನಾಟಕ ರತ್ನ,ಎಲ್ಲರ ಪ್ರೀತಿಯ ಅಪ್ಪು,ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆಯ ನಿಮಿತ್ತ ಒಂದು ನೆನಪು. ಪುನೀತ್ ರಾಜಕುಮಾರ ತಾಲೂಕಿಗೆ ಈ ಹಿಂದೆ ಭೇಟಿಯ ಸಂದರ್ಭದಲ್ಲಿ ಇಲ್ಲಿನ ಕಾಳಿ ನದಿಯ ಉಗಮ ಸ್ಥಾನ,ಇನ್ನಿತರ ಗ್ರಾಮಗಳ ಕಾಡಿನ ಪರಿಸರವನ್ನು ಸುತ್ತಾಡಿ,ಇಲ್ಲಿನ ಜನರ ಜೀವನ ಶೈಲಿ,ಸ್ಥಳೀಯ ಆಹಾರವನ್ನು ಸವಿದು,ಜನ ಸಾಮಾನ್ಯರಂತೆ ಬೆರೆತ ನೆನಪು ಇನ್ನೂ ಹಚ್ಚ ಹಸಿರಾಗಿ ಉಳಿದಿದೆ. (ಜೊತೆಗಿರದ ಜೀವ ಎಂದೆಂದಿಗೂ ಜೀವಂತ.).

ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯಾ ಗ್ರಾಮದ ಡೇರೆಕರ ಕುಟುಂಬದವರ ಜೊತೆ ದಿ.ಪುನೀತ್ ರಾಜಕುಮಾರ ಅವರ ಚಿತ್ರವನ್ನು ಪುಣ್ಯಸ್ಮರಣೆಯ ದಿನದಂದು ಡೇರೆಕರ ಕುಟುಂಬದ ದೀಲಿಪ ಡೇರೆಕರ ಹಾಗೂ ದಿವ್ಯಾ ಡೇರೆಕರ ಮಾಧ್ಯಮಕ್ಕೆ ನೀಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಮಕ್ಕಳು, ಬಾಲಕರು, ಬಾಲಕಿಯರು,ಯುವಕರು,ಯುವತಿಯರು,ಪುರುಷರು,ಮಹಿಳೆಯರು ಹಾಗೂ ಗ್ರಾಮದ ಹಿರಿಯರು ಇರುವುದನ್ನು ಕಾಣಬಹುದಾಗಿದೆ.