ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಜೋಯಿಡಾ ಕ್ಕೆ ಪ್ರಗತಿ ಪರಿಶೀಲನಾ ಸಭೆಗೆ ಶಾಸಕ ಆರ್ ವಿ ದೇಶಪಾಂಡೆ ಅವರು ಬಂದಾಗ ಅವರಿಗೆ ಸುವರ್ಣ ಸಂಭ್ರಮ ವಿಶೇಷಾಂಕ ಸಂಚಿಕೆ “ಸುವರ್ಣ ಪಥ “ವನ್ನು ಜೋಯಿಡಾ ತಾಲೂಕಿನ ಕಾರ್ಯ ನಿರತ ಪತ್ರ ಕರ್ತರು ನೀಡಿದರು.
ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘವು
ಸ್ಥಾಪನೆ ಗೊಂಡು ಐವತ್ತು ವಸಂತ ಗಳು ಕಳೆದ ಹಿನ್ನೆಲೆ ಯಲ್ಲಿ ಜನೆವರಿ 28 ರಂದು ಹೊನ್ನಾವರ ದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ತುಂಬ ಸುಂದರವಾಗಿ ನಡೆಯಿತು ಅಂದಿನ ಕಾರ್ಯ ಕ್ರಮ ದಲ್ಲಿ ಶಾಸಕಆರ್ ವಿ ದೇಶಪಾಂಡೆ ಅವರು ಭಾಗವಹಿಸಬೇಕಾಗಿತ್ತು ಅನಿವಾರ್ಯ ಕಾರಣ ಗಳಿಂದ ಅವರು ಅಂದು ಬಂದಿರಲಿಲ್ಲ ಅದರ ಸವಿನೆನಪಿಗಾಗಿ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಜೋಯಿಡಾ ತಾಲೂಕಾ ಕಾರ್ಯ ನಿರತ ಪತ್ರ ಕರ್ತರ ಸಂಘ ದ ಸದಸ್ಯರು ಗೌರವ ಯುತವಾಗಿ ಸುವರ್ಣ ಪಥ ಸಂಚಿಕೆ ನೀಡಿದರು ಸುವರ್ಣ ಪಥ ಸಂಚಿಕೆ ನೋಡಿದ ದೇಶಪಾಂಡೆ ಅವರು ಪುಟತಿರುವಿ ಅನೇಕ ಸಂದರ್ಭಗಳಲ್ಲಿ ತಾವು ಬಾಗವಸಿದ ಫೋಟೋ ಗಳನ್ನು ನೋಡಿ ಸಂತಸದ ಸಂದರ್ಭದ ನೆನಪು ಮಾಡಿದರು ಜೊತೆಗೆ ಸಂಘ ಸ್ಥಾಪನೆಗೆ ಕಾರಣಿಕರ್ತ ರಾದ ಜಿ ಎಸ್ ಹೆಗಡೆ ಅಜ್ಜಿಬಳ ಅವರನ್ನು ಸ್ಮರಿಸಿದರು. ಐವತ್ತು ವರ್ಷ ಗಳ ಹಿಂದಿನ ಫೋಟೊದಲ್ಲಿ ಅಜ್ಜಿಬಳರನ್ನು ಗುರುತಿಸಿ ನೋಡಿ ಉತ್ತಮ ಸಂಚಿಕೆ ಎಂದರು .
ಈ ಸಂದರ್ಭದಲ್ಲಿ ಕಾರ್ಯ ನಿರತ ಪತ್ರ ಕರ್ತರ ಸಂಘ ಜೋಯಿಡಾ ಅಧ್ಯಕ್ಷ ಸಂದೇಶ ದೇಸಾಯಿ ಜಿಲ್ಲಾ ಕಾರ್ಯದರ್ಶಿ ಅನಂತ ದೇಸಾಯಿ ತಾಲೂಕಾ ಸಂಘದ ಟಿ ಕೆ ದೇಸಾಯಿ ಹರೀಶ್ ಭಟ್ ಮತ್ತು ಸುಭಾಸ್ ಗಾವುಡಾ ಇದ್ದರು.
