ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಮಣಗಿ ಗ್ರಾಮದ ವ್ಯಾಪ್ತಿಯ ಗವೇಗಾಳಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ಯಶಸ್ವಿ ಸಂಪನ್ನಗೊಂಡಿತು.

ಪಾಲಕರು,ಪೋಷಕರು,ಶಿಕ್ಷಕರು, ವಿದ್ಯಾರ್ಥಿಗಳು ಮಾಡಿದ ಮಂಟಪದಲ್ಲಿ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿ,ಭಾವದಿಂದ ಆರತಿ,ಭಜನೆಯನ್ನು ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಕಿರಣ ಕುಮಾರ ನಾಯ್ಕ ಅವರ ಮಾರ್ಗದರ್ಶನ,ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರ,ಪಾಲಕರ,ಪೋಷಕರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು,ಊರಿನ ಹಿರಿಯರು, ಮಾತೆಯರು, ಗಣ್ಯರು,ಶಿಕ್ಷಣ ಪ್ರೇಮಿಗಳು, ಶಾಲೆಯ ಮಕ್ಕಳು, ಶಿಕ್ಷಕರು ಇದ್ದರು.