ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜೋಯಿಡಾ ತಾಲೂಕಿನ ತ್ರೈಮಾಸಿಕ ಅಭಿವೃದ್ಧಿ ಪರಿಶೀಲನಾ ಸಭೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ರಾಜ್ಯ ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಶಾಸಕರು ಆದ ಆರ್ ವಿ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಧಿಕಾರಿಗಳಲ್ಲಿ ನಯ ವಿನಯತೆ ಮತ್ತು ಕೆಲಸ ಮಾಡುವ ಗುಣಗಳಿರಬೇಕು, ಮೊದಲು ಮಾನವ ನಾಗಿ ಬದುಕಲು ಕಲಿಯಬೇಕು. ತಾಲೂಕಿನ ಅಧಿಕಾರಿಗಳು ಹಿಂದಿನ ಸಭೆಯಲ್ಲಿ ಹೇಳಿದ್ದನ್ನೇ ಹೇಳುವುದಲ್ಲ, ಕೆಲಸ ಮಾಡಿದ ಪ್ರಗತಿ ಹೇಳಬೇಕು ಸರಕಾರ ಒಂದು ಕೆಲಸ ಕ್ಕೆ ಹಣ ವೇಳೆ ನಿಗದಿ ಪಡಿಸಿದಾಗ ಸರಿಯಾದ ವೇಳೆಗೆ ಕೆಲಸ ಮುಗಿಸಬೇಕು ಹಾಗಾಗಿ ತಹಶೀಲ್ದಾರ್ ಮತ್ತು ಇ ಓ ಅವರು ಪ್ರತಿ ತಿಂಗಳು ಎಲ್ಲ ಇಲಾಖೆಯವರೊಂದಿಗೆ ಸಭೆ ನಡೆಸಿ ಪ್ರಗತಿ ಸಾಧಿಸಬೇಕು ಸಣ್ಣ ಪುಟ್ಟ ಸಮಸ್ಯೆ ಗಳನ್ನು ಮುಂದಿನ ಸಭೆ ವರೆಗೂ ಎಳೆಯ ಬಾರದು, ಬರುವ ಅನುದಾನ ಬೇಗ ಬಳಕೆ ಮಾಡಿಕೊಳ್ಳಬೇಕು ಎಂದರು.

ಅರಣ್ಯ ಇಲಾಖೆ ಯವರು ಸ್ಥಳೀಯರಿಗೆ ಸಮಸ್ಯೆ ಆಗ ದಂತೆ ನೋಡಿಕೊಳ್ಳ ಬೇಕು, ಕುಡಿಯುವ ನೀರಿನ ಇಲಾಖೆ ಆರೋಗ್ಯ ಇಲಾಖೆ ಗಳು ಜನರಿಗೆ ಅಗತ್ಯ ಸೇವೆನೀಡುವಲ್ಲಿ ಮಾಡುವ ಕೆಲಸ ಸಮಾಧಾನ ಕರವಾಗಿಲ್ಲನೀವು ಜನ ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮಾತ್ರ ಸರಕಾರ ಕ್ಕೆ ನಮಗೆ ಹೆಸರು ಬರುತ್ತದೆ ಎಂದರು ಈ ಹಿಂದೆ ಬರುತ್ತಿದ್ದ ಶಿರಸಿ ಉಳವಿ ಬಸ್ ಈಗ ಯರಮುಖ ದ ವರೆಗೂ ಬರಲಿ ಮತ್ತುರಾತ್ರಿ ತಮ್ಮಣಿಗೆ ಗೆ ಬರುವ ಬದಲಿಗೆ ಮದ್ಯಾಹ್ನ ಬಸ್ ತಮ್ಮಣಿಗೆಗೆ ಬಿಡಲು ದಾಂಡೇಲಿ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರು ಗುಂದ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಅವರ ಬೇಡಿಕೆ ಯಂತೆ ಗುಂದ ಆಸ್ಪತ್ರೆ ಗೆ ಕೂಡಲೇ ಡಾಕ್ಟರ್ ರನ್ನು ನೇಮಿಸುವಂತೆ ಕಾರವಾರ ದ ಡಿ ಎಚ್ ಓ ರವರಿಗೆ ತಿಳಿಸಿದಾಗ ಸಭೆ ಮುಗಿಯುವ ಮೊದಲೇ ಡಾಕ್ಟರ್ ನೇಮಕದ ಆದೇಶ ಶಾಸಕರಿಗೆ ತಲುಪಿತು ಚರ್ಚೆ ಯಲ್ಲಿ ಪ್ರಮುಖರಾದ, ವಿನಯ್ ದೇಸಾಯಿ, ಅರುಣ ದೇಸಾಯಿ, ಮಂಗೇಶ್ ಕಾಮತ, ಸಂಜಯ ಹಣಬರ್ ಇತರರು ಭಾಗವಹಿಸಿದ್ದರು ಎಲ್ಲ ಇಲಾಖೆ ಗಳ ಅಧಿಕಾರಿಗಳು ಜನಪ್ರತಿನಿದಿಗಳು ಭಾಗವಹಿಸಿದ್ದರು.