ಸುದ್ದಿ ಕನ್ನಡ ವಾರ್ತೆ
. ಹಳಿಯಾಳ :ತಾಲೂಕಿನ ಸತತವಾಗಿ 7ನೇ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆನರಾ ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಗೊಂಡ ಜಿಲ್ಲೆಯ ಮಾಜಿ ವಿ.ಪ ಸದಸ್ಯರು, ಬಿಜೆಪಿ ನಾಯಕರಾದ ಎಸ್.ಎಲ್.ಘೋಟ್ನೇಕರ ಅವರನ್ನು ಅವರ ಕಚೇರಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಪತ್ತಿನ ಸಹಕಾರಿ ಬ್ಯಾಂಕ ಗುಂಡೊಳ್ಳಿ ಇದರ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರು ಭೇಟಿಯಾಗಿ ಸನ್ಮಾನಿಸಿ, ಶುಭ ಹಾರೈಸಿದರು.
ಈ ವೇಳೆ ವಿ.ಎಮ್.ಪಾಟೀಲ,ಗಣಪತಿ ಕರಂಜೆಕರ,ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
