ಸುದ್ದಿ ಕನ್ನಡ ವಾರ್ತೆ
. ಯಲ್ಲಾಪುರ:ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ನೀಡುವ ಕಾರ್ಯಕ್ರಮ ನಡೆಯಿತು.
ಚೆಕ್ ವಿತರಿಸಿ ಮಾತನಾಡಿದ ಉಮ್ಮಚಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಪ್ಪಯ್ಯ ಪೂಜಾರಿ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬದವರಿಗೆ ನೀಡುವ ಮೀಸಲು ಹಣವನ್ನು ನಾವು ಮೊದಲೆಲ್ಲಾ ಆ ವರ್ಗದ ಅನಾರೋಗ್ಯ ಪೀಡಿತರಿಗೆ,ಮನೆ ರಿಪೇರಿ ಇತ್ಯಾದಿ ಕೆಲಸಗಳಿಗೆ ನೀಡುತ್ತಿದ್ದೆವು,ಈ ವರ್ಷ ಎಲ್ಲಾ ಸದಸ್ಯರ ತೀರ್ಮಾನದಂತೆ ಎಸ್.ಎಸ್.ಎಲ್.ಸಿ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಲ್ಲಾ ಇಪ್ಪತ್ತೊಂದು ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದೇವೆ,ತಪ್ಪಿ ಉಳಿದವರೂ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದರು.ಕೊಟ್ಟ ಹಣದ ಸದುಪಯೋಗ ಮಾಡಿಕೊಂಡು,ನಿಮ್ಮ ತಂದೆ,ತಾಯಿ,ಊರಿನ,ಪಂಚಾಯತಕ್ಕೆ ಒಳ್ಳೆಯ ಹೆಸರನ್ನು ತನ್ನಿರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗಂಗಾ ಹೆಗಡೆ,ಸದಸ್ಯರುಗಳಾದ ಕೈತಾನ ಡಿಸೋಜ,ಶಿವರಾಯ ಪೂಜಾರಿ,ತಿಮ್ಮವ್ವ ಬಸಾಪುರ, ರೂಪಾ ಪೂಜಾರಿ,ಅಶೋಕ ಪೂಜಾರಿ,ಗ.ರಾ.ಭಟ್ಟ,ಪಂಚಾಯತ ಅಭಿವೃದ್ಧಿ ಅಧಿಕಾರಿ ನಸ್ರೀನ್ ಎಕ್ಕುಂಡಿ ಇದ್ದರು.ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಮೋಹನ ಕಾರ್ಯಕ್ರಮದ ಸ್ವಾಗತ,ನಿರೂಪಣೆ,ವಂದಿಸಿದರು.
