ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಗೋವಾ- ಮಾಜಾಳಿ ಗಡಿಯಲ್ಲಿ ತಪಾಸಣೆಯ ಚೌಕಿಯಲ್ಲಿ ಖಾಸಗಿ ಬಸ್ ನಲ್ಲಿ ದಾಖಲೆಯಿಲ್ಲದೆ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದು ಕೋಟಿ ಹಣ ವಶಕ್ಕೆ ಪಡೆದು ಇಬ್ಬರ ನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಸಾಗಾಟ ಮಾಡುತ್ತಿದ್ದ ವೇಳೆ ಮಾಜಾಳಿ ತಪಾಸಣಾ ಚೌಕಿಯ ಬಳಿ ಪೋಲಿಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ಚೀಲದಲ್ಲಿ ಪತ್ತೆಯಾಗಿದೆ.ಹಣದ ಸಂಬಂಧ ದಾಖಲೆ ಕೇಳಿದಾಗ,ದಾಖಲೆ ನೀಡದ ಕಾರಣ ಬೆಂಗಳೂರು ಮೂಲದ ಕಲ್ಪೇಶ ಕುಮಾರ ಮತ್ತು ರಾಜಸ್ತಾನ ಮೂಲದ ಬಮ್ರಾರಾಮ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಚಿತ್ತಾಕುಲ ಪೋಲಿಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.