ಸುದ್ದಿ ಕನ್ನಡ ವಾರ್ತೆ
ಹಳಿಯಾಳ:ತಾಲೂಕಿನ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಸೋಮವಾರ ಹಳಿಯಾಳದಲ್ಲಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಕುರಿತು ಹಳಿಯಾಳ, ಧಾರವಾಡ, ಅಳ್ನಾವರ, ಕಲಘಟಗಿ, ರೈತ ಬಾಂಧವರಿಂದ ಬ್ರಹತ್ ಪ್ರತಿಭಟನೆ ಜೊತೆಗೆ ಹಳಿಯಾಳದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಸುಮಾರು 5 ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಯಿತು.
ತಾಲೂಕು ಆಡಳಿತ & ಆರಕ್ಷಕ ಇಲಾಖೆ ಮದ್ಯಸ್ತಿಕೆಯಿಂದ ಹಳಿಯಾಳ ಸಕ್ಕರೆ ಕಾರ್ಖಾನೆಯ ಆಡಳಿತ ವರ್ಗದವರು ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಕೆಲವು ವಿಷಯ ಪ್ರಸ್ತಾಪಿಸಿದಾಗ ಅದಕ್ಕೆ ರೈತರು ಸಹಮತಿ ಸೂಚಿಸದ ಕಾರಣ ಪ್ರತಿಭಟನೆಯನ್ನು ಸಕ್ಕರೆ ಕಾರ್ಖಾನೆಯವರು ಮುಂದಿನ ತೀರ್ಮಾನ ಕೈಗೊಳ್ಳುವವರೆಗೆ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವುದಿಲ್ಲ ಅಂತ ವಾಗ್ದಾನ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷರು ಕುಮಾರ್ ಬೋಬಾಟಿ, ಕಬ್ಬು ಬೆಳೆಗಾರರ ಸಂಘದ ಹಿತ ರಕ್ಷಣಾ ಸಮಿತಿ ಅಧ್ಯಕ್ಷರಾದ ನಾಗೇಂದ್ರ ಜಿವೋಜಿ, ತಾಲೂಕು ಅಧ್ಯಕ್ಷ ಶಂಕರ ಕಾಜಗಾರ್, ಕಲಘಟಗಿ ಅಧ್ಯಕ್ಷರು ಉಳವಪ್ಪ ಬಡಿಗೇರ್, ಪ್ರಧಾನ ಕಾರ್ಯದರ್ಶಿ ಪರುಶುರಾಮ್ ಎತ್ತಿನಗುಡ್ಡ, ಧಾರವಾಡ ಅಧ್ಯಕ್ಷರು ಬಸವರಾಜ್ ಬೆಳಗಾಂಕರ, ಅಳ್ನಾವರ ಅಧ್ಯಕ್ಷರು ಭರತೇಶ ಪಾಟೀಲ್, ಮಾಜಿ ಶಾಸಕರು ಸುನೀಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯರು, ಹಾಗೂ ಕೆ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು ಎಸ್. ಎಲ್. ಘೋಟ್ನೆಕರ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಂಜುಳಾ ಗೌಡಾ, ಶಿವಾಜಿ ನರಸಾನಿ,ಅನಿಲ್ ಮುತ್ನಾಳೆ, ಗಣಪತಿ ಕರಂಜೆಕರ,ವಿಠ್ಠಲ ಸಿದ್ದಣ್ಣವರ,ಸೊನಪ್ಪ ಸುಣಕಾರ, ಸಹದೇವ ಮಿರಾಶಿ, ತಾನಾಜಿ ಪಟ್ಟೆಕರ್, ರೈತ ಮುಖಂಡರಾದ ಸಾತೋರಿ ಗೌಡ, ಎಸ್ ಕೆ ಗೌಡ,ಲಕ್ಷ್ಮಣ ಪಾಟೀಲ್, ರಾಮದಾಸ ಬೆಳಗಾಂಕರ, ಜಯರಾಮ್ ಕಳ್ಳಿಮನಿ, ಚೂಡಪ್ಪ ಬೋಬಾಟಿ,ವಿಜಯ ಕುಮಾರ್ ಬೋಬಾಟಿ, ನಾರಾಯಣ ಕೆಸರೇಕರ, ಮಾರುತಿ ಕಾಮರೆಕರ, ಸೇರಿದಂತೆ ಸಾವಿರಾರು ರೈತ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.
