ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ತಾಲೂಕಿನ ರಾಷ್ಟೀಯ ಹೆದ್ದಾರಿಯ 52 ರಲ್ಲಿ ಕಾಶ್ಮೀರ ಸೇಬು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬಾಳೇಗುಳಿ ಗೋಪಾಲ ಕೃಷ್ಣ ದೇವಾಲಯದ ಬಳಿ ನಡೆದಿದೆ.

ಕಾಶ್ಮೀರದಿಂದ ಮಂಗಳೂರಿಗೆ ಸೇಬು ಹಣ್ಣಿನ ಬಾಕ್ಸ್ ಗಳನ್ನು ಸಾಗಿಸುವ, ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ,ಬಾಕ್ಸ್ ನಲ್ಲಿದ್ದ ಸೇಬು ಹಣ್ಣುಗಳು ಹೆದ್ದಾರಿಯ ರಸ್ತೆಯ ಮೇಲೆ ಬಿದ್ದ ಕಾರಣ ಕೆಲ ಕಾಲ ರಸ್ತೆಯ ಸಂಚಾರಕ್ಕೆ ತಡೆಯುಂಟಾಯಿತು.

ಲಾರಿಯಲ್ಲಿದ್ದ ಚಾಲಕ ಮತ್ತು ಸಹಾಯಕ ಯಾವುದೇ ಅಪಾಯ ವಿಲ್ಲದೇ ಪಾರಾಗಿದ್ದು,ಹೆದ್ದಾರಿ ಗಸ್ತು ವಾಹನದ ಪೋಲಿಸ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಲಾರಿ ಮೇಲಕ್ಕೇತ್ತಿದ್ದಾರೆ.ಲಾರಿ ಪಲ್ಟಿಯಾದ ಪರಿಣಾಮ ಸಾಕಷ್ಟು ಬಾಕ್ಸ್ ನಲ್ಲಿಯ ಸೇಬು ಹಣ್ಣುಗಳು ಹಾನಿಯಾದವು,ಸ್ಥಳೀಯರ ಸಹಕಾರದಿಂದ ಹೆದ್ದಾರಿ ರಸ್ತೆಯ ಮೇಲಿನ ಸೇಬು ಹಣ್ಣಿನ ಬಾಕ್ಸ್ ಗಳನ್ನು ಎತ್ತಲಾಯಿತು.