ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ತಾಲೂಕಿನ ಜೀವನ ವಿಕಾಸ ಟ್ರಸ್ಟ್(ರಿ)ಯಲ್ಲಾಪುರ,ಇಂಡಿಯನ್ ಕ್ಯಾನ್ಸರ್ ಸೊಸೈಟಿ ಡೆಲ್ಲಿ ಹಾಗೂ ಅಸ್ಮಿತೆ ಫೌಂಡೇಶನ್ ಶಿರಸಿ ಇವರ ಸಹಯೋಗ ದೊಂದಿಗೆ ಉಚಿತ ಕ್ಯಾನ್ಸರ್ ಜಾಗ್ರತಿ ಮತ್ತು ತಪಾಸಣಾ ಶಿಬಿರ ದಿನಾಂಕ:28-10-2025 ರ ಮಂಗಳವಾರ ಸಮಯ:ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಳ:ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿಕೇರಿಯಲ್ಲಿ ನಡೆಯಲಿದೆ. ಸ್ತನ ಕ್ಯಾನ್ಸರ್ ,ಗರ್ಭಕಂಠದ ಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್ ನ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ.ಈ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರು ಪ್ರಾಥಮಿಕ ತಪಾಸಣೆ ನಡೆಸಲಿದ್ದಾರೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.