ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ವೀರಮಾರುತಿ ತಾಳಮದ್ದಲೆಯ ಕೂಟದ ಕಲಾವಿದರಿಂದ ಮಾಗೋಡಿನ ವೀರಮಾರುತಿ ದೇವಸ್ಥಾನದಲ್ಲಿ ವೀರಮಣಿ ಕಾಳಗ ತಾಳಮದ್ದಲೆ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ತಾಳಮದ್ದಲೆಯ ಹಿಮ್ಮೇಳದ ಭಾಗವತರಾಗಿ ಮಹಾಬಲೇಶ್ವರ ಬೆಳಶೇರು,ಮದ್ದಲೆಯ ವಾದಕರಾಗಿ ನಾಗಪ್ಪ ಕೋಮಾರ,ಸಂಜಯ ಭಟ್ಟ, ಸಂಜಯ ಕೋಮಾರ ಸಹಕಾರ ನೀಡಿದರು. ತಾಳಮದ್ದಲೆಯ ಪಾತ್ರ ಚಿತ್ರಣದಲ್ಲಿ ವೀರಮಣಿಯಾಗಿ ನಾಗರಾಜ ಭಟ್ಟ ಕುಂಕಿಪಾಲ,ಹನುಮಂತನಾಗಿ ಪ್ರಸನ್ನ ಭಟ್ಟ ಮಾಗೋಡ,ಶತ್ರುಘ್ನ ನಾಗಿ ದೀಪಕ ಭಟ್ಟ ಕುಂಕಿಪಾಲ, ಈಶ್ವರನಾಗಿ ಗೋಪಾಲಕೃಷ್ಣ ಭಟ್ಟ ಕಬ್ಬಿನಕುಂಬ್ರಿ ಭಾಗವಹಿಸಿದ್ದರು.