ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಮೊದಲ ಜಾತ್ರೆ (ಖಾಪ್ರಿ) ಕಂಬಳಿ ಜಾತ್ರೆ ತಾಲೂಕು ಕೇಂದ್ರ ಗಾವಡೇವಾಡಾದಲ್ಲಿ ಬುಡಕಟ್ಟು ಕುಣಬಿ ಜನಾಂಗದ ಜಾನಪದ ಸೊಗಡಿನ ಖಾಪ್ರಿ ದೇವರ ವಾರ್ಷಿಕ ಜಾತ್ರೆ ನವ್ಹಂಬರ 3 ಸೋಮವಾರ ದಂದು ನಡೆಯಲಿದೆ.
ಕಾರ್ತಿಕ ಮಾಸದ ಏಕಾದಶಿ ರವಿವಾರ ರಾತ್ರಿ ಕುಣಬಿ ಬುಡಕಟ್ಟು ಸಂಪ್ರದಾಯ ದಂತೆ ಗ್ರಾಮದ ಬುಧವಂತನ ಮನೆ ಅಂಗಳದಲ್ಲಿರಾತ್ರಿ ತುಳಸಿ ವಿವಾಹ ನೆರವೇರಿಸಿ ನಂತರ ರಾತ್ರಿ ಪೂರ್ತಿ ಜಾಗರಣೆ ಮಾಡಲಾಗುತ್ತದೆ.

ಸೋಮವಾರ ಬೆಳಿಗ್ಗೆ ತುಳಸಿ ಕಟ್ಟೆಯ ಸುತ್ತ ದೇವರ ಹಾಡುಗಳನ್ನು ಹೇಳುತ್ತಾ ಕುಣಿತ ಪ್ರಾರಂಭ ವಾಗುತ್ತದೆ ಬೆಳಿಗ್ಗೆ 11 ರ ಸುಮಾರು ಕಂಬಳಿ ವೇಷಧಾರಿ ಖಾಪ್ರಿದೇವರು ಮುಖ್ಯ ವೇದಿಕೆಯಲ್ಲಿ ಅಂದರೆ ತುಳಸಿ ಅಂಗಳದಲ್ಲಿ ಬರಲು ಸಿದ್ದತೆ ಮಾಡಿದ ನಂತರ ಖಾಪ್ರಿ ದೇವರ ಆವ್ಹಾನದ ಹಾಡುಗಳನ್ನು ಹಾಡಲಾಗುತ್ತದೆ.

ಖಾಪ್ರಿದೇವರು ಅಂದರೆ ಹಿರಿಯರ ಎರಡು ಆತ್ಮಗಳಾಗಿವೆ ಒಂದು ವಾರದಿಂದ ದೇವರ ಹೆಸರಿನಲ್ಲಿ ಉಪವಾಸ ಇದ್ದ ಇಬ್ಬರ ಮೈ ಮೇಲೆ ಆತ್ಮ ಬರುವ ನಂಬಿಕೆ ಇದೆ. ಕುಟುಂಬ ಅಂತ ಇಬ್ಬರಿಗೆ ಕಂಬಳಿಯನ್ನು ಪೂರ್ತಿಯಾಗಿ ದೇಹಕ್ಕೆ ಸುತ್ತಿ, ಚಂಡು ಹೂವಿನಿಂದ ಅಲಂಕಾರ ಮಾಡಿದ ವೇಷಧಾರಿ ದೇವರ ಮನೆಯ ಹೊರಗಡೆಯಿಂದ ಬಂದರೆ ಇನ್ನೊಂದು ಖಾಪ್ರಿ ವೇಷಧಾರಿ ದೇವರ ಮನೆಯಿಂದ ಅಂಗಳಕ್ಕೆ ಬಂದು ತುಳಸಿ ಕಟ್ಟೆಯ ಸುತ್ತ ಹಾಡಿನ ತಾಳಕ್ಕೆ ಹೆಜ್ಜೆ ಹಾಕಿ ಕೈಯಲ್ಲಿ ಒನಕೆ ಹಿಡಿದು ಕುಣಿದು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರಿಗೆ ಆಶಿರ್ವಾದ ನೀಡುತ್ತಾರೆ.
ಜಾತ್ರೆಯ ಮೊದಲ ರಾತ್ರಿ ಯಾರು ಕೂಡ ಗ್ರಾಮದ ಸೀಮೆ ಬಿಟ್ಟು ಹೊರಗೆ ಹೋಗುವಂತಿಲ್ಲ. ರಾತ್ರಿ ಭತ್ತದ ಬೆಳೆ ಕಾಯಲು ಯಾರು ಹೋಗುವುದಿಲ್ಲ.ಅಂದು ಕಾಡು ಪ್ರಾಣಿ ಗಳಿಂದ ಬೆಳೆ ಹಾನಿಯಾದ ಉದಾಹರಣೆಯೇ ಇಲ್ಲವೆಂದು ಹೇಳಲಾಗುತ್ತದೆ ರಾತ್ರಿ ಜಾಗರಣೆ ನಾಟಕ ಮಾಡಲಾಗುತ್ತದೆ.
ನವ್ಹಂಬರ 3 ರಂದು ಖಾಪ್ರಿ ದೇವರ ಪ್ರಮುಖ ಜಾತ್ರಾ ಮಹೋತ್ಸವ ಬೆಳಿಗ್ಗೆ 10 ರಿಂದ ಆರಂಭ ವಾಗಿ ಮದ್ಯಾಹ್ನದ ವರೆಗೂ ನಡೆಯುತ್ತದೆ ಹರಕೆಗೆ ಕಂಬಳಿ ಶ್ರೇಷ್ಠ ಈ ಜಾತ್ರೆಯಲ್ಲಿ ಭಕ್ತರು ಹರಕೆಯ ರೂಪದಲ್ಲಿ ಕಂಬಳಿ ಯನ್ನು ಅರ್ಪಿಸುತ್ತಾರೆ, ಹಣ್ಣು ಕಾಯಿಯ ಜೊತೆಗೆ ಹರಕೆ ಹೊತ್ತವರು ಕಂಬಳಿ ಅರ್ಪಿಸಿ ಕೃತಾರ್ಥ ರಾಗುವದರಿಂದ ಈ ಜಾತ್ರೆಗೆ ಕಂಬಳಿ ಜಾತ್ರೆ ಎಂದೂ ಕರೆಯುತ್ತಾರೆ.