ಸುದ್ದಿ ಕನ್ನಡ ವಾರ್ತೆ

. ಜೋಯಿಡಾ: ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಗಾವಡೆವಾಡಾದ ಖಾಪ್ರಿ ದೇವರ ಜಾತ್ರೆಯು ಪ್ರತಿ ವರ್ಷದಂತೆ ಗಾವಡೆವಾಡಾ,ಜೋಯಿಡಾದಲ್ಲಿ ನವೆಂಬರ ದಿನಾಂಕ:03-11-2025 ರಂದು ಸೋಮವಾರ ಶ್ರೀ ಖಾಪ್ರಿ ದೇವರ ಜಾತ್ರಾ ಉತ್ಸವ ನಡೆಯಲಿದೆ.

ಅದೇ ರೀತಿಯಾಗಿ ದಿನಾಂಕ:02-11-2025 ರವಿವಾರದಂದು ರಾತ್ರಿ 9-00ಕ್ಕೆ ತುಳಸಿ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ರಾತ್ರಿ 12-00 ಗಂಟೆಗೆ ಭೀಮಾಸೂರ ವಧ ಎಂಬ ಪೌರಾಣಿಕ ಖೇಳ ನಡೆಯಲಿದೆ. ದಿನಾಂಕ:03-11-2025 ರಂದು ಸೋಮವಾರ ಬೆಳಿಗ್ಗೆ 8-30 ರಿಂದ ಮಧ್ಯಾಹ್ನದವರೆಗೂ ಖಾಪ್ರಿ ದೇವರ ಜಾತ್ರಾ ಉತ್ಸವ ನಡೆಯಲಿದೆ.

ಖಾಪ್ರಿ ದೇವರ ಕಂಬಳಿಗಳ ಸವಾಲ ಕಾರ್ಯಕ್ರಮ ನಡೆಯಲಿದೆ.ಸರ್ವ ಭಕ್ತಾಧಿಗಳೆಲ್ಲರೂ ಬಂದು ತನು ಮನ ಧನದ ಸಹಕಾರ ನೀಡಿ ಶ್ರೀ ಖಾಪ್ರಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸರ್ವ ಗ್ರಾಮಸ್ಥರು ಗಾವಡೆವಾಡಾ ವಿನಂತಿಸಿಕೊಂಡಿದ್ದಾರೆ.

ತಾಲೂಕಿನ ಬುಡಕಟ್ಟು ಕುಣಬಿ ಸಮಾಜದ ಜನರೇ ನಡೆಸಿ ಕೊಡುವ ಈ ಜಾತ್ರೆ ಕಂಬಳಿ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಹಾಡಿನಲ್ಲಿ ಬುಡಕಟ್ಟು ಕುಣಬಿ ಸಮಾಜದವರ ಜನಪದ ಸೋಗಡಿನ ಪ್ರದರ್ಶನ ಜಾತ್ರೆಯ ವಿಶೇಷವಾಗಿದೆ. ದೇವರಿಗೆ ಹರಕೆಯ ರೂಪದಲ್ಲಿ ಕಂಬಳಿಯನ್ನು ದೇವರಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.ಈ ಸಂದರ್ಭದಲ್ಲಿ ಕಂಬಳಿಗೆ ಬಲು ಬೇಡಿಕೆ ಇರುತ್ತದೆ ತಾಲೂಕಿನ ಕೇಂದ್ರಸ್ಥಾನದಲ್ಲಿ ಬೇರೆ ಬೇರೆ ಕಡೆಯಿಂದ ಬಂದ ಕಂಬಳಿ ವ್ಯಾಪಾರ ಮಾಡುವವರು, ಸಾವಿರಾರು ಕಂಬಳಿಯ ರಾಶಿಗಳನ್ನು ಕಾಣಬಹುದು.