ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಚಿರತೆ ಯೊಂದು ಫೋಟೋಲಿ ಗುಂದ ಉಳವಿ ರಸ್ತೆ ಪಕ್ಕ ದಲ್ಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ಸಂತಸ ನೀಡಿದ ಘಟನೆ ನಡೆದಿದೆ.

ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಗಳ ನಡುವೆ ಫೋಟೋಲಿ ಅರಣ್ಯ ಪ್ರದೇಶ ದಲ್ಲಿ ಈ ಚಿರತೆ ಕಾಣಿಸಿದೆ ಶನಿವಾರ ಕೆಲಸದ ನಿಮಿತ್ತ ಹೊರಗೆ ಹೋದ ಪತ್ರಕರ್ತ ತಿಲಕರಾಜ್ ಇದೇ ರಸ್ತೆ ಯಲ್ಲಿ ಬರುವಾಗ ರಾತ್ರಿಯಾಗಿತ್ತು, ಮೋಡ ಕವಿದ ವಾತಾವರಣ ಬೇರೆ ಇಂತ ಸ್ಥಿತಿಯಲ್ಲಿ ರಾತ್ರಿ ಸಮಯದಲ್ಲಿ ಮನೆ ಸೇರುವ ವಿಚಾರ ಮಾಡುತ್ತಾ ತಮ್ಮ ಕಾರ್ ಚಾಲನೆಯಲ್ಲಿ ನಿರತ ರಾಗಿದ್ದರು, ಆಗ ಎದುರಿಗೆ ಕಂಡ ಚಿರತೆ ಯನ್ನು ನೋಡಿದರು, ಚಿರತೆ ಕಂಡ ತಕ್ಷಣ ತಮ್ಮ ಗಾಡಿಯ ವೇಗ ಕಡಿಮೆ ಮಾಡಿ ಕೊಂಡು ಅಕ್ಕ ಪಕ್ಕ ಮತ್ತೆ ಬೇರೆ ಚಿರತೆ ಗಳು ಇರಬಹುದೆಂದು ನೋಡಿದರು, ಬೇರೆ ಚಿರತೆ ಗಳಿರಲಿಲ್ಲ, ಅದೂ ಕೂಡ ಒಂಟಿಯಾಗಿ ಓಡಾಡುವ ವಯಸ್ಸಿನದು ಅಂದಾಜು 3 ರಿಂದ 5 ವರ್ಷ ಇರಬಹುದು ಎಂದು ಹೇಳುತ್ತಾರೆ ಕೂಡಲೇ ತಮ್ಮ ಮೊಬೈಲ್ ನಿಂದ ಚಿತ್ರಿಸಿ ಕೊಂಡಿದ್ದಾರೆ.