ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಇಲ್ಲಿನ ಬಸ್ ನಿಲ್ದಾಣದ ಸಮೀಪದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಫೆಬ್ರುವರಿ 16 ಬೈ ವಾರ ಗಣ ಹವನ ಮತ್ತು ಪಾರಾಯಣ ಕಾರ್ಯಕ್ರಮ ಜರುಗಿತು.

ಫೆಬ್ರವರಿ 17ರಂದು ಸೋಮವಾರ ನವಚಂಡಿ ಹವನ ನೆರವೇರಿಸಲಾಗುತ್ತಿದ್ದು ಇಂದು ಮಧ್ಯಾಹ್ನ ಮಹಾಸಂತರಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀದೇವರ ಕೃಪೆಗೆ ಪಾತ್ರರಾಗಿ ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ಚೌಡೇಶ್ವರಿ ದೇವಿ ಟ್ರಸ್ಟ್ ಸಮಿತಿ ಮನವಿ ಮಾಡಿದೆ.

ಚೌಡೇಶ್ವರಿ ದೇವಿಗೆ ಅಲಂಕಾರ

ವಾರ್ಷಿಕೋತ್ಸವದ ಅಂಗವಾಗಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ನೆರವೇರಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಿವಿಧ ಸೇವೆ ಸಲ್ಲಿಸುತ್ತಿದ್ದಾರೆ.