ಸುದ್ದಿ ಕನ್ನಡ ವಾರ್ತೆ

ಜೋಯಿಡಾ:. ಪ್ರತಿಷ್ಠಿತ ಕೆ ಡಿ ಸಿ ಸಿ ಬ್ಯಾಂಕ್ ಆಡಳಿತ ಮ0ಡಲಿಗೆ ಇಂದು ನಡೆದ ಚುನಾವಣೆ ಯಲ್ಲಿ ಜೋಯಿಡಾ ತಾಲೂಕಿನಿಂದ ಸ್ಪರ್ದಿಸಿದ ಕೃಷ್ಣಾ ದೇಸಾಯಿ 3ನೇ ಬಾರಿ ಗೆಲ್ಲುವ ಮೂಲಕ ಗೆಲುವಿನ ನಗಾರಿ ಬಾರಿಸಿ ವಿರೋಧಿಗಳ ಗುಂಪು ಕ0ಗೇಡುವಂತೆ ಮಾಡಿದ್ದಾರೆ.

ಇಂದು ಬ್ಯಾಂಕ್ ನ ಆವರಣದಲ್ಲಿ ಬೆಳಿಗ್ಗೆ ಯಿಂದ ಮತದಾನ ನಡೆಯಿತು. ಜೋಯಿಡಾ ದ ಒಂಬತ್ತು ಮತಗಳಲ್ಲಿ ಐದು ಮತ ಪಡೆದು ಕೃಷ್ಣಾ ದೇಸಾಯಿ 3ನೇ ಬಾರಿ ಜಯಭೇರಿ ಬಾರಿಸಿ ಸಂತಸ ಹಂಚಿಕೊಂಡರು ಅವರ ಪ್ರತಿ ಸ್ಪರ್ದಿ ಮಂಗೇಶ ಕಾಮತ ಒಂದು ಮತದಿಂದ ಸೊಲೋಪ್ಪಿಕೊಂಡರು. ಕಾಂಗ್ರೆಸ್ ನಲ್ಲೇ ಎರಡು ಗುಂಪುಗಳು ಬ್ಯಾಂಕ್ ಚುನಾವಣೆ ಯಲ್ಲಿ ಸ್ಪರ್ದಿಸಿದ್ದು, ಶಾಸಕ ಶಿವರಾಂ ಹೆಬ್ಬಾರ ಬಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ರ ಬಣ ಗಳ ಜಂಗಿ ಕುಸ್ತಿ ಯಲ್ಲಿ ಯಾರ ಬಣ ಮೇಲುಗೈ ಸಾಧಿಸಲಿದೆ ಎಂದು ಒಂದೆರಡು ದಿನಗಲ್ಲಿ ತಿಳಿದು ಬರಲಿದೆ.