ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ದ ಯರಮುಖ ಗ್ರಾಮದ ಕರ್ಕಮನೆ ಸದಾಶಿವ ಭಟ್ ರ ತೋಟ ದಲ್ಲಿ ನಿನ್ನೆ ಸುರಿದ ಬಾರೀ ಗಾಳಿ ಮಳೆಗೆ ಹದಿನೈದಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ, ಇದರಿಂದ ಹಲವು ಸಾವಿರ ರೂಪಾಯಿ ಗಳ ಅಡಿಕೆ ನೀರಲ್ಲಿ ಕೊಚ್ಚಿ ಹೋಗಿದ್ದು, ಫಲ ಬರಿತ 15ಕ್ಕೂ ಹೆಚ್ಚು ಅಡಿಕೆ ಮರ ಗಳು ಮತ್ತು ಕೆಲವು ಅಡಿಕೆ ಸಸಿಗಳು ಬಿರುಗಾಳಿಗೆ ಮುರಿದು ಬಿದ್ದಿವೆ.
ಕೆಲವು ಮರಗಳು ಬಿರುಗಾಳಿಗೆ ಸಿಕ್ಕಿ ಸೀಳಿ ಹೋಗಿವೆ. ಕಷ್ಟ ಪಟ್ಟು ಬೆಳೆಸಿದ ಪಸಲು, ಜೊತೆಗೆ ಪಸಲು ಕೊಡುವ ಮರಗಳು ಬಿದ್ದು ಹೋದಾಗ ತುಂಬಾ ಬೇಸರ ವಾಗುತ್ತದೆ ಎಂದು ಸದಾಶಿವ ಭಟ್ ರು ಹೇಳುತ್ತಾರೆ. ಕಳೆದ ಒ0ದು ವಾರದಿಂದ ದಿಂದ ತಾಲೂಕಿನ ವಿವಿಡೆದೆಯಲ್ಲಿ ಸಾಕಷ್ಟು ಬಿರುಗಾಳಿ ಮಳೆ ಬೀಳುತ್ತಿದೆ, ಇದು ಅನಿರೀಕ್ಷಿತ ಮಳೆ ಇದರಿಂದ ತೋಟದಲ್ಲಿ ಬಿದ್ದ ಅಡಿಕೆ ತೆಂಗಿನಕಾಯಿ ಗಳು ಕೊಚ್ಚಿ ಹೋಗುತ್ತಿವೆ ಯಾವಾಗ ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಇಂತ ಸ್ಥಿತಿಯಲ್ಲಿ ಕೃಷಿಕನಿಗೆ ಕೃಷಿ ಮತ್ತು ಹೈನುಗಾರಿಕೆ ಮಾಡುವದು ತುಂಬಾ ಕಷ್ಟ ಎಂದು ರೈತರು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಾರೆ.
ಕಳೆದ ಒಂದು ವಾರದಲ್ಲಿ ಬೀಸಿದ ಬಿರುಗಾಳಿಗೆ ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ಗಳ ಬೆಲೆ ಯ ಅಡಿಕೆ ಬೆಳೆ ನಾಶ ವಾಗಿರುವುದನ್ನು ರೈತರು ತೋಟಗಾರಿಕೆ ಇಲಾಖೆಯ ಗಮನಕ್ಕೆ ತಂದಿರುತ್ತಾರೆ. ಒಟ್ಟಾರೆ ಈ ಅಕಾಲಿಕ ಬಿರುಗಾಳಿ ಮಳೆಯಿಂದ ಕೃಷಿಕರು ತೊಂದರೆಗೆಸಿಲುಕಿದ್ದಾರೆ.
