ಸುದ್ದಿ ಕನ್ನಡ ವಾರ್ತೆ

. ಶಿರಸಿ:ತಾಲೂಕಿನ ರಾಷ್ಟೀಯ ಸ್ವಯಂಸೇವಕ ಸಂಘ ಶಿರಸಿ ನಗರ ಮತ್ತು ಗ್ರಾಮಾಂತರ ವತಿಯಿಂದ ಸಂಘ ಶತಾಭ್ದಿ ನಿಮಿತ್ತ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ದಿನಾಂಕ:25 – 10- 2025 ರ ಶನಿವಾರ ಸಾಯಂಕಾಲ 5-00 ಗಂಟೆಗೆ, ವಿಕಾಸಾಶ್ರಮ ಮೈದಾನ,ಶಿರಸಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗಣಪತಿ ಜೋಗಕ್ಕೆ,ಉದ್ಯಮಿಗಳು, ಮುಖ್ಯ ವಕ್ತಾರರಾಗಿ ಗೋಪಾಲ ನಾಗರಕಟ್ಟೆ,ಕೇಂದ್ರಿಯ ಕಾರ್ಯದರ್ಶಿ,ವಿಶ್ವ ಹಿಂದೂ ಪರಿಷತ್,ಅಯೋಧ್ಯಾ ಉಪಸ್ಥಿತರಿರುವರು.

ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು ಭವಧೀಯ ಶಂಕರ ನಾರಾಯಣ ಹೊಸಕೊಪ್ಪ ಮಾನ್ಯ ಜಿಲ್ಲಾ ಸಂಚಾಲಕರು,ಶಿರಸಿ ಜಿಲ್ಲೆ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ. ಸಾರ್ವಜನಿಕ ಸಮಾರಂಭಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಲಿದೆ.