ಸುದ್ದಿ ಕನ್ನಡ ವಾರ್ತೆ

. ಕಾರವಾರ:ತಾಲೂಕಿನ ಬಿಣಗಾದ ಕದಂಬ ನೌಕಾನೆಲೆಯ ಹತ್ತಿರ ಅಬ್ಬರದ ಗಾಳಿ ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಹಲವು ವಾಹನಗಳು ಜಖಂ ಆಗಿದ್ದು,ಆಕಳೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

ಎಂದಿನಂತೆ ಮರದ ಕೆಳಗೆ ಹಲವು ಬೈಕ್ ಗಳನ್ನು ನಿಲ್ಲಿಸಲಾಗಿತ್ತು, ಮಳೆಯಿಂದ ಆಶ್ರಯ ಪಡೆಯಲು ಆಕಳೊಂದು ನಿಂತಿದ್ದು,ಜೋರಾಗಿ ಬೀಸಿದ ಗಾಳಿ ಮಳೆಗೆ ಬೃಹತ್ ಮರವೊಂದು ನಡುವೆ ತುಂಡಾಗಿ ಬಿದ್ದಿದೆ.ಆಕಸ್ಮಿಕವಾಗಿ ಉಂಟಾದ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾದರು. ಬೃಹತ್ ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಯಿತು.ಬಳಿಕ ನೌಕಾನೆಲೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು,ಪೋಲಿಸರು,ಸ್ಥಳೀಯರು ಒಟ್ಟಾಗಿ ಮರವನ್ನು ತೆರವುಗೊಳಿಸುವುದರ ಮೂಲಕ ರಸ್ತೆಯ ಸಂಚಾರಕ್ಕೆ ಮುಕ್ತ ಗೊಳಿಸಿದರು.